Connect with us

BANTWAL

ಬಂಟ್ವಾಳ ಚರ್ಚ್ ಕಳ್ಳತನಕ್ಕೆ ಯತ್ನ; ಪವಿತ್ರ ಸೊತ್ತುಗಳಿಗೆ ಹಾನಿ

ಬಂಟ್ವಾಳ, ಜನವರಿ 23 : ಬಂಟ್ವಾಳದ ನಾವೂರು ಗ್ರಾಮದ ಫರ್ಲ ಚರ್ಚಿಗೆ ಕಳ್ಳರು ನುಗ್ಗಿ ಹಣಕ್ಕೆ ತಡಕಾಡಿ ಸೊತ್ತುಗಳಿಗೆ ಹಾನಿ ಮಾಡಿರುವ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಕಳ್ಳರು ಚರ್ಚಿನೊಳಗೆ ಬರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಆದರೆ ಗುರುತು‌ ಪತ್ತೆಯಾಗಿಲ್ಲ. ಚರ್ಚಿನ ಬಾಗಿಲು ಮುರಿದು ಒಳ್ಳ ನುಗ್ಗಿರುವ ಕಳ್ಳರು ಹಣಕ್ಕೆ ಹುಡುಕಾಟ ನಡೆದಿದ್ದು, ಆದರೆ ಚರ್ಚಿನಲ್ಲಿ ಹಣದೇ ಇಡದೇ ಇರುವುದರಿಂದ ಅವರು ಬರಿಗೈಯಲ್ಲಿ ವಾಪಾಸಾಗಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಘಟನೆ ಶುಕ್ರವಾರ (ಜ.22) ರಾತ್ರಿ ನಡೆದಿದ್ದು, ಚರ್ಚಿನ ಪವಿತ್ರ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.