Connect with us

BANTWAL

ಬಂಟ್ವಾಳ ಮನೆಗೆ ನುಗ್ಗಿ 50 ಸಾವಿರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ ಮನೆಗೆ ನುಗ್ಗಿ 50 ಸಾವಿರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ ಅಕ್ಟೋಬರ್ 19: ಮನೆಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕಿನ ಮಂಚಿ ಸಮೀಪದ ಇರಾ ಎಂಬಲ್ಲಿ ನಡೆದಿದೆ. ಇರಾ ಗ್ರಾಮದ ಪಂಜಿಕಲ್ಲು ಸೂತ್ರಬೈಲು ನಿವಾಸಿ ಇಬ್ರಾಹಿಂ ರಿಯಾಜ್ ಎಂಬವರ ಮನೆಗೆ ನುಗ್ಗಿದ ಕಳ್ಳರು ಸುಮಾರು 50ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಕಳವು ಮಾಡಿದ್ದಾರೆ.

ಇಬ್ರಾಹಿಂ ರಿಯಾಜ್ ಅವರ ಮನೆಯ ಕಿಟಕಿಯ ಮೂಲಕ ಹಿಂಬದಿಯ ಬಾಗಿಲು ಚಿಲಕ ತೆಗೆದು ಮನೆಯ ಒಳಗೆ ಪ್ರವೇಶ ಮಾಡಿದ ಕಳ್ಳರು ಮನೆಯವರು ಮಲಗಿದ್ದ ಕೋಣೆಯಲ್ಲಿದ್ದ ಗೊದ್ರೇಜ್ ನಲ್ಲಿ ಇಟ್ಟಿದ್ದ 12 ಗ್ರಾಂ ತೂಕದ ಚಿನ್ನದ ಸರ, 4 ಗ್ರಾಂ ತೂಕದ ಮಗುವಿನ ಬ್ರಾಸ್ ಲೈಟ್ ಹಾಗೂ 200 ರೂ. ನಗದು ಹಣವನ್ನು ಕಳವು ಮಾಡಿದ್ದಾರೆ ಎಂದು ಗ್ರಾಮಾಂತರ ಪೋಲೀಸ್ ಠಾಣೆಗೆ ಇಬ್ರಾಹಿಂ ರಿಯಾಜ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅದೇ ಸಂದರ್ಭದಲ್ಲಿ ರಿಯಾಜ್ ಅವರ ಮನೆಯ ಹತ್ತಿರ ಇರುವ ಇಸ್ಮಾಯಿಲ್ ಎಂಬವರ ಮನೆಗೆ ನುಗ್ಗಲು ಪ್ರಯತ್ನ ನಡೆಸಿ ವಿಫಲರಾಗಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಬೇಟಿ ನೀಡಿದ್ದಾರೆ. ಗ್ರಾಮಾಂತರ ಎಸ್.ಐ.ಪ್ರಸನ್ನ ಅವರು ಘಟನಾ ಸ್ಥಳ ಕ್ಕೆ ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

comments