ಹಾಸಿಗೆ ಗೋದಾಮಿಗೆ ಬೆಂಕಿ ಸುಟ್ಟು ಕರಕಲಾದ ಲಕ್ಷಾಂತರ ಮೌಲ್ಯ ವಸ್ತುಗಳು

ಮಂಗಳೂರು ಅಕ್ಟೋಬರ್ 19: ಹಾಸಿಗೆ ಗೋದಾಮಿಗೆ ಬೆಂಕಿ ತಗುಲಿದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ಮಂಗಳೂರು ತೊಕಟ್ಟು ಸಮೀಪದ ಕಲ್ಲಾಪು ಪಟ್ಲ ಎಂಬಲ್ಲಿ ನಡೆದಿದೆ.

ಹಾಸಿಗೆ ಗೋದಾಮು ಇದಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ತಗುಲಿದೆ ಎಂದು ಹೇಳಲಾಗಿದ್ದು, ಗೊದಾಮಿನಲ್ಲಿ ಬೆಂಕಿಯ ಕೆನ್ನಾಲಿಕೆ ಜಾಸ್ತಿಯಾಗುತ್ತಿದ್ದ ಹಿನ್ನಲೆ ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರು, ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಬೆಂಕಿಯ ರಭಸಕ್ಕೆ ಗೋದಾಮಿನ ಒಳಗೆ ಇದ್ದ, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಲಾಗಿದೆ. ಇನ್ನು ಈ ಘಟನೆಯಲ್ಲಿ ಯಾವುದೇ ಜೀವ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ಅಗ್ನಿ ಶಾಮಕ ದಳ ಸ್ಥಳದಲಿದ್ದು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Facebook Comments

comments