Connect with us

    KARNATAKA

    ಹಣೆ ಮೇಲೆ ಗಂಡನ ಹೆಸರು ‘ಟ್ಯಾಟು’ ಹಾಕಿಸಿಕೊಂಡ ಹೆಂಡತಿ!

    ಬೆಂಗಳೂರು, ಮೇ 23: ವಿಭಿನ್ನ ರೀತಿಯಲ್ಲಿ ಪರಸ್ಪರ ಪ್ರೀತಿ ವ್ಯಕ್ತಪಡಿಸುವುದು ಇತ್ತೀಚಿಗೆ ಟ್ರೆಂಡ್ ಆಗುತ್ತಿದೆ. ಸಮುದ್ರದ ಆಳದಲ್ಲಿ ಪ್ರಪೋಸ್‌ ಮಾಡುವುದು, ಗಾಳಿಯಲ್ಲಿ ತೇಲಾಡುತ್ತಾ ಪ್ರೀತಿ ವ್ಯಕ್ತಪಡಿಸುವುದು…. ಹೀಗೆ ಅನೇಕ ರೀತಿಯಲ್ಲಿ ಪ್ರೇಮಿಗಳು, ದಂಪತಿಗಳು ತಮ್ಮ ಪ್ರೀತಿಯನ್ನು ತೋರ್ಪಡಿಸುವುದು ನೋಡಿದ್ದೆವೆ.

    ಇಲ್ಲೊಬ್ಬ ಮಹಿಳೆ ತನ್ನ ಗಂಡನ ಹೆಸರನ್ನು ಹಣೆ ಮೇಲೆ ಟ್ಯಾಟು ಹಾಕಿಸಿಕೊಂಡು ವಿಶಿಷ್ಟ ರೀತಿಯಲ್ಲಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಟ್ಯಾಟು ಸ್ಟುಡಿಯೊವೊಂದು ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದೆ.

    ನಿಮ್ಮ ಪ್ರೀತಿಪಾತ್ರರನ್ನು ಟ್ಯಾಗ್‌ ಮಾಡಿ ಎಂದು ಬರೆದು ಈ ವಿಡಿಯೋವನ್ನು ಹಂಚಿಕೊಂಡಿದೆ. ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಹಲವರು ವಿಡಿಯೊ ನೋಡಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಇದು ಫೇಕ್, ಪ್ರಚಾರಕ್ಕಾಗಿ ಹೀಗೆ ಮಾಡಿದ್ದಾರೆ ಎಂದು, ಪ್ರೀತಿಯನ್ನು ಈ ರೀತಿ ವ್ಯಕ್ತಪಡಿಸುವುದು ಹುಚ್ಚುತನ ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply