KARNATAKA
ಹುಬ್ಬಳ್ಳಿಯಲ್ಲಿ “ಫ್ರೀ ವೇಡ್ಡಿಂಗ್ ಶೂಟ್” ಮಾಡುವಾಗ ದುರಂತ…ಇಬ್ಬರ ಮೃತದೇಹ ಪತ್ತೇ
ಹಬ್ಬಳ್ಳಿ , ಜನವರಿ 23: ಪ್ರಿವೆಡ್ಡಿಂಗ್ ಶೂಟ್ ಮಾಡುವಾಗ ನಡೆದ ದುರಂತದಿಂದ ಮೂವರು ಸಾವನ್ನಪ್ಪಿದ ಘಟನೆ ಹಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದ ಬಳಿ ನಡೆದಿದೆ. ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಸದಸ್ಯೆ ಸುಧಾ ಮಣ್ಣೆಂಕುಟ್ಲಾ ಸಂಬಂಧಿಗಳಾದ ನಾಲ್ವರು ಕಿರೇಸೂರ ಬಳಿಯ ಕಾಲುವೆಯ ಬಳಿಯಲ್ಲಿ ಸೆಲ್ಪಿ ಪೋಟೊಗಾಗಿ ತೆರಳಿದ್ದರು.
ಇದೇ ಸಮಯದಲ್ಲಿ ಜೇನು ನೊಣಗಳು ಬಂದ ಕಾರಣದಿಂದ ಭಯದಿಂದ ಎಲ್ಲರೂ ಓಡಿ ಹೋಗಿದ್ದು, ಅದರಲ್ಲಿ ಮೂರು ಯುವಕರು ನೀರಿಗೆ ಬಿದ್ದು ದುರ್ಘಟನೆ ಸಂಭವಿಸಿದೆ. ಜೊತೆಗಿದ್ದ ಯುವತಿಯೋರ್ವಳು ಪೈಪ್ ಹಿಡಿದು ಜೋತು ಬಿದ್ದಿದ್ದಳು. ಆಕೆಯನ್ನ ಕುರಿ ಕಾಯುವವರು ಆಕೆಯನ್ನ ಬದುಕಿಸಿದ್ದು, ಜೊತೆಗಿದ್ದ ಇನ್ನೊಂದು ಯುವಕನು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ದುರ್ಘಟನೆಯಲ್ಲಿ ಮೂರು ಯುವಕರು ನೀರು ಪಾಲಾಗಿದ್ದು ಇಬ್ಬರ ಶವ ಮೇಲೆಕ್ಕೇತ್ತಲಾಗಿದ್ದು ಮತ್ತೋರ್ವನಿಗಾಗಿ ಹುಡುಗಾಟ ಮುಂದುವರೆದಿದೆ.
ನಿನ್ನೆ ಇಳಿಸಂಜೆ ಹೊತ್ತು ಈ ದುರ್ಘಟನೆ ಸಂಭವಿಸಿದ್ದು ರಾತ್ರಿಯಿಂದಲೇ ಕಾರ್ಯಾಚರಣೆ ನಡೆಸಲಾಗಿತ್ತು. ತಡರಾತ್ರಿ ಬೆಳಕಿನ ಸಮಸ್ಯೆಯಾಗಿದ್ದರಿಂದ ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ನಡೆದಿದ್ದು, ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಬಳಿ ಎರಡು ಶವಗಳು ದೊರಕಿವೆ. ಮೃತರನ್ನು ಪೂನಾ ಮೂಲದ ಗಜಾನನ ರಾಜಶೇಖರ ಹಾಗೂ ಜೋಶಿ ಕ್ಲೆಮೆಂಟ್ ಜಂಗಮ ಎಂದು ಗುರುತ್ತಿಸಲಾಗಿದೆ ಮತ್ತೊರ್ವ ನಾಪತ್ತೆಯಾದ ಯುವಕ ಸನ್ನಿ ಎಂಬವನಿಗಾಗಿ ಹುಡುಕಾಟ ಮುಂದುವರೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದು ಯುವಕರ ಅಜಾಗರೂಕತೆಯಿಂದಲೇ ದುರಂತ ಸಂಭವಿಸಿದೆ.