LATEST NEWS
ಸಿಎಂ “ಸಿದ್ದು ಖಾನ್ “ಎಂದು ಫೇಸ್ ಬುಕ್ ಕಮೆಂಟ್ ಹಾಕಿದ ಪೋಲಿಸ್ ಪೇದೆ ಅಮಾನತು
ಸಿಎಂ”ಸಿದ್ದು ಖಾನ್ ” ಎಂದು ಫೇಸ್ ಬುಕ್ ಕಮೆಂಟ್ ಹಾಕಿದ ಪೋಲಿಸ್ ಪೇದೆ ಅಮಾನತು
ಮಂಗಳೂರು, ನವೆಂಬರ್ 02 : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯ ಮಾಡಿ ಸಂದೇಶ ಪ್ರಕಟಿಸಿದ ಪೊಲೀಸ್ ಸಿಬ್ಬಂದಿ ರಾಜ ಶಿವಪ್ಪ ಅವರನ್ನು ಅಮಾನತು ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರು ರಾಜ ಶಿವಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ರಾಜ ಶಿವಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿದ್ದರು .
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೀನಿನ ಊಟದ ವಿವಾದ ಭುಗಿಲೆದ್ದಿತ್ತು.
ಅದನ್ನೇ ವ್ಯಂಗ್ಯ ವಾಗಿಸಿ ಮುಖ್ಯಮಂತ್ರಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿಯನ್ನು ತುಲನೆ ಮಾಡಿ ರಾಜ ಶಿವಪ್ಪ ಸಂದೇಶ ಪ್ರಕಟಿಸಿದ್ದರು .
“ಕೋಟ್ಯಂತರ ಹಿಂದೂ ಜನ ಆರಾಧಿಸುವ ನಾಡಿನ ಪ್ರಮುಖ ದೇವಸ್ಥಾನವನ್ನು ಮಾಂಸದ ಊಟ ಸೇವಿಸಿ ದೇವರ ದರ್ಶನ ಮಾಡಿದ ಮುಖ್ಯಮಂತ್ರಿ “ಎಂದು ಬರೆದು ಚಿತ್ರ ಪ್ರಕಟಿಸಿದ್ದರು .
ಅದಲ್ಲದೆ “ಮೈಲಾರಿ ಕಂಡಾಗ ಸಿಡುಕಿದ ಮುಖ ಮುಲ್ಲಾನನ್ನು ಕಂಡಾಗ ಅರಳಿದ ಮುಖ” ಎಂದು ಬರೆದು ಫೋಟೋ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಲ್ಲದೇ ಮುಖ್ಯಮಂತ್ರಿಯವರನ್ನು “ಸಿದ್ದು ಖಾನ್ ” ಎಂದು ಸಂಬೋಧಿಸಿ ಬರಹ ಪ್ರಕಟಿಸಿರುವುದು ಈಗ ಕಾಂಗ್ರೆಸ್ ಮುಖಂಡರ ಕೆಂಗಣ್ಣಿಗೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಪೊಲೀಸ್ ಕಾನ್ ಸ್ಟೆಬಲ್ ರಾಜ ಶಿವಪ್ಪ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದರು.
ಈ ಕುರಿತು ಬುಧವಾರ ಯುವ ಕಾಂಗ್ರೆಸ್ ಮುಖಂಡರು ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ಕಾನ್ಸ್ಟೆಬಲ್ ರಾಜ ಶಿವಪ್ಪ ಅವರ ವಿರುದ್ಧ ದೂರು ಸಲ್ಲಿಸಿದ್ದು ಈ ಕೂಡಲೇ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
ಈ ಎಲ್ಲಾ ಹಿನ್ನೆಲೆಯಲ್ಲಿ ಪೋಲಿಸ್ ಪೇದೆ ರಾಜ ಶಿವಪ್ಪ ಇದೀಗ ಅಮಾನತುಗೊಂಡಿದ್ದಾರೆ. .
.