Connect with us

LATEST NEWS

ಮಾನವಿಯತೆ ಮೆರೆದ ಸಚಿವ ಖಾದರ್, ಅಶಕ್ತ ವೃದ್ಧ ದಂಪತಿಗಳಿಗೆ ಸ್ಥಳದಲ್ಲೇ ನೀಡಿದರು ರೇಶನ್ ಕಾರ್ಡ್ 

 

ಮಾನವಿಯತೆ ಮೆರೆದ ಸಚಿವ ಖಾದರ್, ಅಶಕ್ತ ವೃದ್ಧ ದಂಪತಿಗಳಿಗೆ ಸ್ಥಳದಲ್ಲೇ ನೀಡಿದರು ರೇಶನ್ ಕಾರ್ಡ್ 

ಮಂಗಳೂರು,ನವೆಂಬರ್ 02 : ಸಚಿವ ಯು.ಟಿ. ಖಾದರ್  ಮಾನವಿಯತೆಯ ಗುಣಗಳಿಗೆ ಸದಾ ಸುದ್ದಿಯಲ್ಲಿದ್ದಾರೆ.

ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ ಖಾದರ್ ತನ್ನ ಕ್ಷೇತ್ರದ ಅಶಕ್ತ ವೃದ್ಧ ದಂಪತಿಗಳಿಗೆ ಪ್ರತ್ಯಕ್ಷವಾಗಿ ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾಗಿರುವ ಯು.ಟಿ. ಖಾದರ್ ತಾನು ಪ್ರತಿನಿಧಿಸುತ್ತಿರುವ ಮಂಗಳೂರು ವಿಧಾನ ಸಭಾಕ್ಷೇತ್ರದ ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಪಲ ಎಂಬಲ್ಲಿ ರಸ್ತೆ ಕಾಮಾಗಾರಿಯ ವೀಕ್ಷಣೆಗಾಗಿ ಭೇಟಿ ನೀಡಿದ್ದರು.

ಈ ಸಂದರ್ಭದಲ್ಲಿ  ಅಮೃತ ನಗರದ ಬಳಿ ಸಚಿವರ ಕಾರನ್ನು ಕಂಡು 80 ವರ್ಷ ಪ್ರಾಯದ ಯಶವಂತ ಆಚಾರಿ ಅವರು ಬಂದಿದ್ದಾರೆ.

ಹಿರಿ ಜೀವ ಯಶವಂತ ಆಚಾರಿ ಅವರನ್ನು ಕಂಡು ಸಚಿವ ಖಾದರ್ ತಮ್ಮ ಕಾರನ್ನು ನಿಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಯಶವಂತ ಆಚಾರಿ ತನ್ನ ಬಳಿ ರೇಶನ್ ಕಾರ್ಡ್ ಇಲ್ಲ ,ಜೀವನ ನಡೆಸಲು ಕಷ್ಟ ವಾಗಿದೆ.

ತನ್ನ ಪತ್ನಿ ಪಾರ್ಶ್ವವಾಯು ಪೀಡಿತೆ ಆ ಕಾರಣ ನಡೆದಾಡಲು ಸಾಧ್ಯವಾಗುತ್ತಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

ವೃದ್ದ ದಂಪತಿಗಳ ಅಳಲನ್ನು ಆಲಿಸಿದ ಸಚಿವರು ವಯೋ ವೃದ್ದ ದಂಪತಿಗಳ ಮನೆಗೆ ತೆರಳಿ ರೇಶನ್  ಕಾರ್ಡ್ ಮಾಡಿ ಕೊಡಲು ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚಿಸಿದ್ದಾರೆ. ಈ  ಸಂದರ್ಭದಲ್ಲಿ ಮನೆಯಲ್ಲಿ ದಂಪತಿಗಳ ಬೆರಳಚ್ಚು ಪಡೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಸಚಿವರ ಆಪ್ತರು ತಮ್ನದೇ ವಾಹನದಲ್ಲಿ  ದೇರಳಕಟ್ಟೆಯ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿ  ರೇಶನ್ ಕಾರ್ಡ್ ಮಾಡಿಸಿ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಗೂ ಆ ವೃದ್ದ ದಂಪತಿಗೆ ಸರಕಾರದಿಂದ ಸಿಗುವ ಅನಿಲ ಭಾಗ್ಯ ಯೋಜನೆಯಲ್ಲಿ ಗ್ಯಾಸ್ ಸಂಪರ್ಕ ನೀಡುವ ಭರವಸೆ ಯನ್ನು ಸಚಿವರು ನೀಡಿದ್ದಾರೆ.
ರೇಶನ್ ಕಾರ್ಡ್ ದೊರೆಯುತ್ತಿದ್ದಂತೆ ಆ ವೃದ್ದ ದಂಪತಿ  ಬಾವುಕರಾಗಿ ಆಹಾರ ಸಚಿವ ಯು.ಟಿ.ಖಾದರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ವಯೋ ವೃದ್ಧ ದಂಪತಿಗೆ ಸಚಿವ ಯು. ಟಿ ಖಾದರ್ ಆಸರೆಯಾದ ಫೋಟೋಗಳು ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಸಚಿವರ ಮಾನವೀಯತೆಯ ಸ್ಪಂದನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

Facebook Comments

comments