Connect with us

LATEST NEWS

ಗುಬ್ಬಿ ಮೇಲೆ ಮೇಯರ್ ಬ್ರಹ್ಮಾಸ್ತ್ರ,ವಾಚ್ ಮ್ಯಾನ್ ಹೆಂಡತಿಯ ಮೇಲೆ ಮರ್ಡರ್ ಕೇಸ್

ಗುಬ್ಬಿ ಮೇಲೆ ಮೇಯರ್ ಬ್ರಹ್ಮಾಸ್ತ್ರ,ವಾಚ್ ಮ್ಯಾನ್ ಹೆಂಡತಿಯ ಮೇಲೆ ಮರ್ಡರ್ ಕೇಸ್

 

ಮಂಗಳೂರು, ನವೆಂಬರ್ 02 : ಅಪಾರ್ಟ್ ಮೆಂಟ್ ವಾಚ್ ಮ್ಯಾನ್ ಹೆಂಡತಿಗೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್ ಹೊಡೆದಿರೋ ವಿಚಾರ ಇದೀಗ ಹೊಸ ತಿರುವು ಪಡೆದಿದೆ.

ವಾಚ್ ಮ್ಯಾನ್ ಹೆಂಡತಿ ಕಮಲಾ ವಿರುದ್ದ ಮೇಯರ್ ಕವಿತಾ ಸನಿಲ್ ಕೊಲೆ ಯತ್ನ ಕೇಸು ಹಾಕಿದ್ದಾರೆ.

ತನ್ನ ಮಗುವನ್ನು ಕಮಲಾ ಕೊಲೆ ಮಾಡೋಕೆ ಯತ್ನಿಸಿದ್ದಾಳೆ ಅಂತಾ ಮೇಯರ್ ಅಮ್ಮ ನಗರದ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮೇಯರ್ ಕವಿತಾ ಸನಿಲ್ ಎಂಟು ಸೆಕ್ಷನ್ ಗಳ ಅಡಿಯಲ್ಲಿ ಗಂಭೀರ ಪ್ರಕರಣವನ್ನು ಕಮಲಾ ಮೇಲೆ ಹಾಕಿದ್ದು, ಇದೀಗ ಬರ್ಕೆ ಪೋಲಿಸರು ಕಮಲಾರ ಬೆನ್ನು ಬಿದ್ದಿದ್ದಾರೆ.

ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಕರಾಟೆಪಟುವಾಗಿರುವ ಮಂಗಳೂರು ಮೇಯರ್ ಕವಿತಾ ಸನಿಲ್ ಬಡಪಾಯಿ ಗಳ ಮೇಲೆ ಕಾನೂನು ಸಮರ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ದಿನದಿಂದ ದಿನಕ್ಕೆ ಈ ಪ್ರಕರಣ ಕಗ್ಗಂಟಾಗಿ ಮಾರ್ಪಾಡುತ್ತಿದೆ.

ಬಡ ವಾಚ್ ಮೆನ್ ಕುಟುಂಬದ ಬೆನ್ನಿಗೆ ಭಾರತೀಯ ಜನತಾ ಪಕ್ಷ ನಿಂತರೆ ಮೇಯರ್ ಕವಿತಾ ಸನಿಲ್ ಹಿಂದೆ ಇಡೀಯ ಕಾಂಗ್ರೆಸ್ ಸರ್ಕಾರವೇ ನಿಂತಿದೆ.

ಕಾನೂನು ಪಾಲಿಸಬೇಕಾದ ಪೋಲಿಸರು ರಾಜಕೀಯ ಒತ್ತಡಗಳಿಗೆ ಮಣಿದಿರುವ ಹಾಗೆ ಕಾಣುತ್ತಿದೆ.

ಪ್ರಕರಣ ನಡೆದು ಮೂರು ದಿನದ ಬಳಿಕ ಕವಿತಾ ಸನಿಲ್ ಕಮಲಾ ವಿರುದ್ದ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸದೆ ನೇರವಾಗಿ ದೂರು ಸ್ವೀಕರಿಸಿ ಕಮಲಾ ಮೇಲೆ ಕೊಲೆ ಯತ್ನ ಕೇಸ್ ಹಾಕಿದ್ದಾರೆ.

ಆದರೆ ಮೇಯರ್ ವಿರುದ್ದ ಕಮಲಾ ನೀಡಿದ ದೂರನ್ನೂ ತಡವಾಗಿ ಸ್ವೀಕರಿಸಿದ್ದು ಅಧಿಕಾರ ದುರ್ಬಳಕೆ ಸ್ಪಷ್ಟವಾಗಿದೆ.

ವಾಚ್ ಮ್ಯಾನ್ ಹೆಂಡತಿ ಕಮಲಾ ಗೆ ಮೂರು ಪುಟ್ಟ ಮಕ್ಕಳಿದ್ದು, ಮಕ್ಕಳೂ ತಾಯಿಯ ಜೊತೆ ಜೈಲು ಪಾಲಾಗುವ ಭೀತಿಯಲ್ಲಿದ್ದಾಳೆ.

 

 

Facebook Comments

comments