MANGALORE
ಮಂಗಳೂರು ಮಟ್ಕಾ ದಂಧೆ : 6 ಮಂದಿಯ ಸೆರೆ
ಮಂಗಳೂರಿನಲ್ಲಿ ಮಟ್ಕಾ ದಂಧೆ : 6 ಮಂದಿಯ ಸೆರೆ
ಮಂಗಳೂರು, ನವೆಂಬರ್ 02 : ನಗರದ ಸರ್ವಿಸ್ ಬಸ್ ನಿಲ್ದಾಣ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ 6 ಮಂದಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಬುಧವಾರ ಸಂಜೆ ನಗರದ ಸ್ಟೇಟ್ ಬ್ಯಾಂಕ್ ಸರ್ವಿಸ್ ಬಸ್ ನಿಲ್ದಾಣ ಬಳಿಯ ಒಣಮೀನು ಮಾರುಕಟ್ಟೆಯ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆಯನ್ನು ನಡೆಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಬಜಾಲಿನ ರಾಕೆಶ್ ಪೂಜಾರಿ, ಸ್ಟೇಟ್ ಬ್ಐಅಂಕ್ ಮಿಷನ್ ಕಂಪೌಂಡ್ ನಿವಾಸಿ ದಯಾನಂದ, ಗೋರಿಗುಡ್ಡೆ ಪಂಡಿತ್ ಹೌಸ್ ಅಶೋಕ್, ಉಜ್ಜೊಡಿಯ ನಂದನ್, ಜೆಪ್ಪು ಬಪ್ಪಾಲ್ ಮಹಮ್ಮದ್ ಯಾಸಿನ್, ಅಡ್ಡೂರಿನ ಇಮ್ತಿಯಾಜ್ ಯಾಸಿನ್ ಅವರನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತರಿಂದ ಮಟ್ಕಾ ಆಟಕ್ಕೆ ಬಳಸಿದ ರೂ. 17,970 ನಗದು, ಮಟ್ಕಾ ನಂಬ್ರ ಬರೆದ ಚೀಟಿಗಳು, 7 ಮೊಬೈಲ್ ಫೋನ್ ಗಳು ಹಾಗೂ ಒಂದು ಹೊಂಡಾ ಅಕ್ಟಿವಾ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ. 56,770 ಆಗಿರುತ್ತದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
You must be logged in to post a comment Login