Connect with us

  LATEST NEWS

  ಪ್ರಾಂಶುಪಾಲೆಯನ್ನು ಬಲವಂತವಾಗಿ ಹೊರತಬ್ಬಿದ ಶಾಲಾ ಆಡಳಿತ ಮಂಡಳಿ, ಉತ್ತರ ಪ್ರದೇಶದ ವಿಡಿಯೋ ವೈರಲ್..!

  ಪ್ರಯಾಗರಾಜ್‌ : ಪ್ರಾಂಶುಪಾಲೆಯನ್ನೇ ಶಾಲಾ ಆಡಳಿತ ಮಂಡಳಿ ಬಲವಂತವಾಗಿ ಎಳೆದಾಡಿ ಹೊರತಬ್ಬಿದ ಅಘಾತಕಾರಿ ಘಟನೆ ಉತ್ತರ ಪ್ರದೇಶದ ಪ್ರಯಾಗರಾಜ್ ನಲ್ಲಿ ನಡೆದಿದೆ.

  ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿರುವ ಬಿಷಪ್ ಜಾನ್ಸನ್ ಗರ್ಲ್ಸ್ ಹೈಸ್ಕೂಲ್​​ನ ಪ್ರಾಂಶುಪಾಲಕಿ ಪಾರುಲ್ ಸೊಲೊಮನ್ ಅವರನ್ನು ಆಡಳಿತ ಮಂಡಳಿಯು ಬಲವಂತವಾಗಿ ಹೊರದಬ್ಬಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶ ಹುಟ್ಟುಹಾಕಿದೆ. ವೈರಲ್​​ ಆದ ವಿಡಿಯೋದಲ್ಲಿ, ಶಾಲೆಯ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಗುಂಪು ಪ್ರಾಂಶುಪಾಲರ ಕೊಠಡಿಗೆ ತೆರಳಿ ಪ್ರಾಂಶುಪಾಲೆಯನ್ನು ಕುರ್ಚಿಯಿಂದ ಬಲವಂತವಾಗಿ ಎಳೆದು ಹೊರಹಾಕಿದ್ದಾರೆ. ಇದಲ್ಲದೇ ಅದೇ ಸಮಯದಲ್ಲಿ ಹೊಸ ಪ್ರಾಂಶುಪಾಲರನ್ನು ನೇಮಕ ಮಾಡಿ ಅವರನ್ನು ಕುರ್ಚಿಯಲ್ಲಿ ಕೂರಿಸಿ ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದಾರೆ. ಶಾಲೆಯ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಗುಂಪು ಪ್ರಾಂಶುಪಾಲರ ಕಚೇರಿಗೆ ಪ್ರವೇಶಿಸಿ ಆಕೆಯ ಕುರ್ಚಿಯನ್ನು ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಒಪ್ಪದ ಪ್ರಾಂಶುಪಾಲೆಯ ಮೊಬೈಲನ್ನು ಕಿತ್ತುಕೊಂಡು ಬಲವಂತವಾಗಿ ಎಳೆದ್ಯೊಯ್ದು ಹೊರಹಾಕಲಾಗಿದೆ. ಬಳಿಕ ಹೊಸ ಪ್ರಾಶುಂಪಾಲರನ್ನು ನೇಮಕ ಮಾಡಲಾಗಿದೆ. ಈ ಘಟನೆಯು ಶಿಕ್ಷಣದ ಸ್ಥಿತಿ ಮತ್ತು ಶಾಲಾ ಆಡಳಿತಗಾರರ ವರ್ತನೆಯ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಾಶುಂಪಾಲಕಿ ಪಾರುಲ್ ಸೊಲೊಮನ್ ಕರ್ನಲ್ ಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  https://x.com/i/status/1809111754095694130

  Share Information
  Advertisement
  Click to comment

  You must be logged in to post a comment Login

  Leave a Reply