LATEST NEWS
ಇಂಧನ ಬೆಲೆ ಇಳಿಸುವವರೆಗೆ ಹಾಲಿನ ದರ ಲೀಟರ್ಗೆ 100 ರೂ! ಎನಿದು ಹೊಸ ಪ್ರತಿಭಟನೆ?

ಚಂಡೀಗಢ, ಮಾರ್ಚ್ 01: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ಸತತವಾಗಿ ಏರಿಕೆ ಕಂಡುಬರುತ್ತಿದ್ದು. ಪ್ರತಿ ಮೂಲೆಯಲ್ಲೂ ಜನರು ಈ ಬೆಳವಣಿಗೆಯನ್ನು ಖಂಡಿಸಿ ಹೋರಾಟ ಮಾಡಲಾರಂಭಿಸಿದ್ದಾರೆ. ಆದರೆ ಹರಿಯಾಣದ ಹಿಸಾರ್ನಲ್ಲಿ ಬೇರೆಯದ್ದೇ ರೀತಿಯಲ್ಲಿ ಹೋರಾಟ ಆರಂಭಿಸಲು ನಿರ್ಧರಿಸಲಾಗಿದೆ.ಹಿಸಾರ್ನ ರೈತರು ಹೊಸ ರೂಪದ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಇಂಧನ ಬೆಲೆ ಇಳಿಸುವವರೆಗೆ ಅವರು ಡೇರಿಗೆ ಕೊಡುವ ಹಾಲಿನ ಮೊತ್ತ ಲೀಟರ್ಗೆ 100 ರೂಪಾಯಿಯಷ್ಟಾಗಲಿದೆ. ಮಾರ್ಚ್ 1ರಿಂದಲೇ ಈ ದರ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಕುರಿತಾಗಿ ರೈತ ಮಹಾಪಂಚಾಯತ್ನಲ್ಲಿ ರೈತರಿಗೆ ಸೂಚನೆ ನೀಡಲಾಗಿದೆ.
Haryana: Khap panchayat in Hisar decided to increase rate of milk against farm laws & rising fuel prices
"We've decided to give milk at the price of Rs 100/litre. We urge dairy farmers to sell milk at same price to govt cooperative societies," said Panchayat Spox (27.02) pic.twitter.com/hmfdw70BNg
— ANI (@ANI) February 27, 2021
ರೈತ ಮುಖಂಡ ರಾಮ್ನಿವಾಸ್ ನೇತೃತ್ವದಲ್ಲಿ ರೈತ ಮಹಾಪಂಚಾಯತ್ ಸಭೆ ನಡೆಸಲಾಗಿದೆ. ಆ ವೇಳೆ ಇಂತದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಜನರಿಗೆ ಎಂದಿನಂತೆ ಲೀಟರ್ಗೆ 55ರಿಂದ 60 ರೂಪಾಯಿ ಬೆಲೆಯಲ್ಲಿ ಹಾಲು ಮಾರಾಟ ಮಾಡಲಾಗುವುದು. ಆದರೆ ಡೇರಿಗೆ ಮಾತ್ರ ಹಾಲಿನ ದರವನ್ನು ಲೀಟರ್ಗೆ 100 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.
