LATEST NEWS
ಪಾಕಿಸ್ತಾನಕ್ಕೆ ತೆರಳುವ ಮುನ್ನ ಪೆಹಲ್ಗಾಮ್ ಗೆ ಭೇಟಿ ನೀಡಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ

ದೆಹಲಿ ಮೇ 18: ಪಾಕಿಸ್ತಾನದ ಐಎಸ್ಐ ಅಧಿಕಾರಿಗಳಿಗೆ ಭಾರತದ ಸೇನೆಯ ಕುರಿತು ಮಾಹಿತಿ ನೀಡಿದ ಆರೋಪದಲ್ಲಿ ಅರೆಸ್ಟ್ ಆಗಿರುವ ಹರ್ಯಾಣದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ (Jyoti Malhotra) ಕಾಶ್ಮೀರದ ಪಹಲ್ಗಾಮ್‌ಗೂ (Pahalgam) ತೆರಳಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಟ್ರಾವೆಲ್ ವಿದ್ ಜೋ ಎಂಬ ಹೆಸರಿನ ಯುಟ್ಯೂಬ್ ಚಾನಲೆ ನಡೆಸುವ ಜ್ಯೋತಿ ಜನವರಿ ತಿಂಗಳಿನಲ್ಲಿ ಪಹಲ್ಗಾಮ್‌ಗೆ ತೆರಳಿದ್ದ ವಿಡಿಯೋ ಅಪ್ಲೋಡ್ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿ ವಿಡಿಯೋಗಳು ಈಗ ವೈರಲ್ ಆಗಿದೆ.

ಸರ್ಕಾರಿ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಮೇ 16ರಂದು ಎಫ್‌ಐಆರ್ ದಾಖಲಾಗಿದೆ. ನ್ಯಾಯಾಲಯ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ನೆಟ್ಟಿಗರು ಈಕೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿಯ ಸಿಬ್ಬಂದಿ ಎಹ್ಸಾನ್ ಉರ್ ರಹೀಮ್ ಅಲಿಯಾಸ್ ಡ್ಯಾನಿಷ್ ಜೊತೆ ಜ್ಯೋತಿ ಸಂಪರ್ಕ ಹೊಂದಿದ್ದಳು. ಭಾರತದ ಕುರಿತು ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಡ್ಯಾನಿಷ್‌ನನ್ನು ಕೇಂದ್ರ ಸರ್ಕಾರವು ಇದೇ ಮೇ 13ರಂದು ಗಡೀಪಾರು ಮಾಡಿತ್ತು. 2023ರಲ್ಲಿ ಪಾಕ್‌ಗೆ ಹೋಗಿದ್ದ ಜ್ಯೋತಿ ಪಾಕ್ ಡ್ಯಾನಿಶ್ ಜೊತೆ ನಿಕಟ ಸಂಬಂಧ ಬೆಳೆಸಿದ್ದಳು. ಅಲ್ಲದೇ ಪಾಕ್ ಗುಪ್ತಚರ ಏಜೆಂಟ್‌ಗಳೊಂದಿಗೆ ಸಹ ಸಂಪರ್ಕ ಹೊಂದಿದ್ದಳು. ‘ಟ್ರಾವೆಲ್ ವಿತ್ ಜೋ’ ಯೂಟ್ಯೂಬ್ ನಡೆಸುತ್ತಿದ್ದ ಜ್ಯೋತಿ ತನ್ನ ಯೂಟ್ಯೂಬ್ ಚಾನಲ್‌ನಲ್ಲಿ ಪಾಕಿಸ್ತಾನ ಪರ ಇರುವ ವಿಷಯಗಳನ್ನು ಅಪ್ಲೋಡ್ ಮಾಡುತ್ತಿದ್ದಳು. ಅಲ್ಲದೇ ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.