Connect with us

    LATEST NEWS

    ಇಂಧನ ಬೆಲೆ ಇಳಿಸುವವರೆಗೆ ಹಾಲಿನ ದರ ಲೀಟರ್​ಗೆ 100 ರೂ! ಎನಿದು ಹೊಸ ಪ್ರತಿಭಟನೆ?

    ಚಂಡೀಗಢ, ಮಾರ್ಚ್ 01: ದೇಶದಲ್ಲಿ ಪೆಟ್ರೋಲ್​, ಡೀಸೆಲ್​ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ಸತತವಾಗಿ ಏರಿಕೆ ಕಂಡುಬರುತ್ತಿದ್ದು. ಪ್ರತಿ ಮೂಲೆಯಲ್ಲೂ ಜನರು ಈ ಬೆಳವಣಿಗೆಯನ್ನು ಖಂಡಿಸಿ ಹೋರಾಟ ಮಾಡಲಾರಂಭಿಸಿದ್ದಾರೆ. ಆದರೆ ಹರಿಯಾಣದ ಹಿಸಾರ್​ನಲ್ಲಿ ಬೇರೆಯದ್ದೇ ರೀತಿಯಲ್ಲಿ ಹೋರಾಟ ಆರಂಭಿಸಲು ನಿರ್ಧರಿಸಲಾಗಿದೆ.ಹಿಸಾರ್​ನ ರೈತರು ಹೊಸ ರೂಪದ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಇಂಧನ ಬೆಲೆ ಇಳಿಸುವವರೆಗೆ ಅವರು ಡೇರಿಗೆ ಕೊಡುವ ಹಾಲಿನ ಮೊತ್ತ ಲೀಟರ್​ಗೆ 100 ರೂಪಾಯಿಯಷ್ಟಾಗಲಿದೆ. ಮಾರ್ಚ್​ 1ರಿಂದಲೇ ಈ ದರ ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಕುರಿತಾಗಿ ರೈತ ಮಹಾಪಂಚಾಯತ್​ನಲ್ಲಿ ರೈತರಿಗೆ ಸೂಚನೆ ನೀಡಲಾಗಿದೆ.

    ರೈತ ಮುಖಂಡ ರಾಮ್ನಿವಾಸ್​ ನೇತೃತ್ವದಲ್ಲಿ ರೈತ ಮಹಾಪಂಚಾಯತ್​ ಸಭೆ ನಡೆಸಲಾಗಿದೆ. ಆ ವೇಳೆ ಇಂತದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಸಾಮಾನ್ಯ ಜನರಿಗೆ ಎಂದಿನಂತೆ ಲೀಟರ್​ಗೆ 55ರಿಂದ 60 ರೂಪಾಯಿ ಬೆಲೆಯಲ್ಲಿ ಹಾಲು ಮಾರಾಟ ಮಾಡಲಾಗುವುದು. ಆದರೆ ಡೇರಿಗೆ ಮಾತ್ರ ಹಾಲಿನ ದರವನ್ನು ಲೀಟರ್​ಗೆ 100 ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply