LATEST NEWS
ಅಪರಿಚಿತರ ಗುಂಡಿಗೆ ಮತ್ತೊಬ್ಬ ಉಗ್ರ ಬಲಿ ….ನಿದ್ರೆ ಕಳೆದುಕೊಂಡ ಪಾಕಿಸ್ತಾನದ ಉಗ್ರರು

ಪಾಕಿಸ್ತಾನ ಡಿಸೆಂಬರ್ 06: ಭಾರತಕ್ಕೆ ಬೇಕಾಗಿದ್ದ ಉಗ್ರರು ಇದೀಗ ಒಬ್ಬರಾಗಿ ಒಬ್ಬರು ಸಾವನಪ್ಪುತ್ತಿದ್ದಾರೆ. ಅನಾಮಿಕ ವ್ಯಕ್ತಿಗಳು ಈಗಾಗಲೇ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಉಗ್ರರನ್ನು ಕೊಲ್ಲುತ್ತಿದ್ದಾರೆ. ಇದೀಗ ಪಾಕಿಸ್ತಾನದಲ್ಲಿ ಭಾರತಕ್ಕೆ ಬೇಕಾದ ಮತ್ತೊಬ್ಬ ಶತ್ರುವಿನ ಹತ್ಯೆಯಾಗಿದೆ. ಲಷ್ಕರ್-ಎ-ತೊಯ್ಬಾದ ಟಾಪ್ ಕಮಾಂಡರ್ ಅದ್ನಾನ್ ಅಹ್ಮದ್ ಅಲಿಯಾಸ್ ಹಂಜಾಲಾ ಅದ್ನಾನ್ ನನ್ನು ಪಾಕಿಸ್ತಾನದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.
ಕರಾಚಿಯಲ್ಲಿ ಲಷ್ಕರ್ ಭಯೋತ್ಪಾದಕ ಹಂಜಲಾ ಅದ್ನಾನ್ ಮೇಲೆ ಅಪರಿಚಿತ ದಾಳಿಕೋರರು ದಾಳಿ ನಡೆಸಿದ್ದಾರೆ. 2015ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರ ಮತ್ತು 2016ರಲ್ಲಿ ಪಾಂಪೋರ್‌ನಲ್ಲಿ ಸಿಆರ್‌ಪಿಎಫ್ ಬೆಂಗಾವಲು ಪಡೆಯ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಆಗಿದ್ದ. ಪಾಂಪೋರ್ ದಾಳಿಯಲ್ಲಿ 8 ಯೋಧರು ಹುತಾತ್ಮರಾಗಿದ್ದರೆ, 22ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದರು.

ಡಿಸೆಂಬರ್ 3ರ ರಾತ್ರಿ ಹಂಜಾಲಾ ಅದ್ನಾನ್ ಮೇಲೆ ಅಪರಿಚಿತ ಬಂದೂಕುಧಾರಿಗಳು ದಾಳಿ ಮಾಡಿದರು. ಅವನ ಮೇಲೆ ನಿರಂತರವಾಗಿ ಗುಂಡುಗಳನ್ನು ಹಾರಿಸಲಾಯಿತು. ಹಂಜಾಳಗೆ ನಾಲ್ಕು ಗುಂಡು ತಗುಲಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು. ಹಂಜಾಲಾ ಹತ್ಯೆಯು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್‌ಗೆ ದೊಡ್ಡ ಹೊಡೆತ ಎಂದು ಪರಿಗಣಿಸಲಾಗಿದೆ. ಏಕೆಂದರೆ ಆತನನ್ನು ಹಫೀಜ್ ಸಯೀದ್ ನ ಬಲಗೈ ಬಂಟ ಎಂದು ಪರಿಗಣಿಸಲಾಗಿತ್ತು.