Connect with us

    LATEST NEWS

    ಇಸ್ರೇಲ್ ಸೈನಿಕರ ಮೊದಲ ಜಯ, 60 ಉಗ್ರರ ಕೊಂದು 250 ಒತ್ತೆಯಾಳುಗಳ ರಕ್ಷಿಸಿದ ಸೇನೆ..!

    ಕಳೆದ 6 ದಿನಗಳ ಯುದ್ದದಲ್ಲಿ ಇಸ್ರೇಲ್ ಸೇನೆಗೆ ಮೊದಲ ಜಯ ಲಭಿಸಿದೆ. ಹಮಾಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಒತ್ತೆಯಾಳಾಗಿದ್ದ ಸುಮಾರು 250 ಜನರನ್ನು ಶುಕ್ರವಾರ ಇಸ್ರೇಲ್‌ನ ರಕ್ಷಣಾ ಪಡೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

    ಟೆಲ್ ಅವಿವ್: ಕಳೆದ 6 ದಿನಗಳ ಯುದ್ದದಲ್ಲಿ ಇಸ್ರೇಲ್ ಸೇನೆಗೆ ಮೊದಲ ಜಯ ಲಭಿಸಿದೆ. ಹಮಾಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಒತ್ತೆಯಾಳಾಗಿದ್ದ ಸುಮಾರು 250 ಜನರನ್ನು ಶುಕ್ರವಾರ ಇಸ್ರೇಲ್‌ನ ರಕ್ಷಣಾ ಪಡೆ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

    ಗಾಝಾ (Gaza) ಭದ್ರತಾ ಬೇಲಿ ಪ್ರದೇಶದ ಬಳಿ 60ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರನ್ನು ಕೊಂದು ಒತ್ತೆಯಾಳುಗಳನ್ನು ಹೇಗೆ ರಕ್ಷಿಸಿದರು ಎಂಬುದನ್ನು ತೋರಿಸುವ ಹೆಡ್‌ಕ್ಯಾಮ್ ದೃಶ್ಯಗಳನ್ನು ಐಡಿಎಫ್ ಎಕ್ಸ್ ಪೋಸ್ಟ್‌ನಲ್ಲಿ ಹಂಚಿಕೊಂಡಿದೆ.

    ಸೈನಿಕರು ಸುಮಾರು 250 ಒತ್ತೆಯಾಳುಗಳನ್ನು ಜೀವಂತವಾಗಿ ರಕ್ಷಿಸಿದ್ದಾರೆ. 60ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರನ್ನು ಕೊಲ್ಲಲಾಗಿದೆ ಮತ್ತು ಹಮಾಸ್ ದಕ್ಷಿಣ ನೌಕಾ ವಿಭಾಗದ ಉಪ ಕಮಾಂಡರ್ ಮುಹಮ್ಮದ್ ಅಬು ಅಲಿ ಸೇರಿದಂತೆ 26 ಮಂದಿಯನ್ನು ಬಂಧಿಸಲಾಗಿದೆ ಎಂದು ಐಡಿಎಫ್ ತಿಳಿಸಿದೆ.

    ಇಸ್ರೇಲ್‌ನಲ್ಲಿ ಹಮಾಸ್ ಭಯೋತ್ಪಾದಕರ ದಾಳಿಗೆ ಸಾವನ್ನಪ್ಪಿರುವವರ ಸಂಖ್ಯೆ 1,300 ದಾಟಿದೆ. 3,300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ಹಮಾಸ್ ಹೆಚ್ಚಿನ ಸಂಖ್ಯೆಯಲ್ಲಿ ಇಸ್ರೇಲ್‌ನಿಂದ ಜನರನ್ನು ಅಪಹರಿಸಿ, ಅವರನ್ನು ಗಾಜಾದಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡಿತು. ಇನ್ನು ಇಸ್ರೇಲ್‌ನ ಪಡೆಗಳು ಪ್ರತಿದಾಳಿ ನಡೆಸಿದ್ದು, ಇಸ್ರೇಲ್ ಹಾಗೂ ಗಡಿ ಪ್ರದೇಶದಲ್ಲಿ 1,500ಕ್ಕೂ ಹೆಚ್ಚು ಹಮಾಸ್ ಭಯೋತ್ಪಾದಕರ ಮೃತದೇಹಗಳು ಪತ್ತೆಯಾಗಿವೆ.

    ಈ ಬಗ್ಗೆ ಬರೆದಿರುವ ಐಡಿಎಫ್, ಫ್ಲೋಟಿಲ್ಲಾ 13 ಎಲೈಟ್ ಘಟಕವನ್ನು ಅಕ್ಟೋಬರ್ 7 ರಂದು ಸುಫಾ ಮಿಲಿಟರಿ ಪೋಸ್ಟ್‌ನ ನಿಯಂತ್ರಣವನ್ನು ಮರಳಿ ಪಡೆಯುವ ಜಂಟಿ ಪ್ರಯತ್ನದಲ್ಲಿ ಗಾಜಾ ಭದ್ರತಾ ಬೇಲಿಯ ಸುತ್ತಲಿನ ಪ್ರದೇಶಕ್ಕೆ ನಿಯೋಜಿಸಲಾಗಿದೆ.

    ಹಮಾಸ್ ಭಯೋತ್ಪಾದಕರು ಇಸ್ರೇಲ್ (Israel) ಮೇಲೆ ಮಾರಣಾಂತಿಕ ದಾಳಿ ನಡೆಸಿ ಅದರ ಭೂಪ್ರದೇಶಕ್ಕೆ ನುಸುಳಿದ ಕೂಡಲೇ ಐಡಿಫ್‌ನಿಂದ ಸೇನಾ ಕಾರ್ಯಾಚರಣೆ ನಡೆಸಲಾಯಿತು. ಹಮಾಸ್ ಉಗ್ರರನ್ನು ಎದುರಿಸಲು ಸುಮಾರು 13 ಸೈನಿಕರನ್ನು ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್ ಮೂಲಕ ಕಳುಹಿಸಲಾಯಿತು.

    ಸೈನಿಕರ ಹೆಡ್‌ಕ್ಯಾಮ್‌ನಲ್ಲಿ ಸೆರೆಯಾಗಿರುವ ವೀಡಿಯೋದಲ್ಲಿ ಫ್ಲೋಟಿಲ್ಲಾ 13 ಎಲೈಟ್ ಯುನಿಟ್ ಸಿಬ್ಬಂದಿ ಹಲವಾರು ಸುತ್ತು ಗುಂಡುಗಳನ್ನು ಹೊಡೆದು, ಭಯೋತ್ಪಾದಕರನ್ನು ಸೆರೆಹಿಡಿಯುವುದು ಕಂಡುಬಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply