LATEST NEWS
ಬಿರುಮಲೆ ಗುಡ್ಡದಲ್ಲಿ ಯುವಕ-ಯುವತಿಯರ ಅಸಭ್ಯ ವರ್ತನೆ ಪೊಲೀಸರಿಗೆ ಮಾಹಿತಿ ನೀಡಿದ ಬಜರಂಗದಳ

ಬಿರುಮಲೆ ಗುಡ್ಡದಲ್ಲಿ ಯುವಕ-ಯುವತಿಯರ ಅಸಭ್ಯ ವರ್ತನೆ ಪೊಲೀಸರಿಗೆ ಮಾಹಿತಿ ನೀಡಿದ ಬಜರಂಗದಳ
ಪುತ್ತೂರು ಫೆಬ್ರವರಿ 23: ಸಾರ್ವಜನಿಕ ಸ್ಥಳದಲ್ಲಿ ಅಸಹ್ಯ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರತ್ಯೇಕ ಕೋಮಿನ ಯುವಕ-ಯುವತಿಯರ ತಂಡವನ್ನು ಪುತ್ತೂರು ನಗರ ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಪುತ್ತೂರಿನ ಪ್ರವಾಸೀ ತಾಣವಾಗಿರುವ ಬಿರುಮಲೆ ಗುಡ್ಡದಲ್ಲಿ ಈ ತಂಡ ಅಸಭ್ಯವಾಗಿ ವರ್ತಿಸುತ್ತಿದೆ ಎನ್ನುವ ದೂರು ಭಜರಂಗದಳಕ್ಕೆ ದೊರೆತ ಹಿನ್ನಲೆಯಲ್ಲಿ ಭಜರಂಗದಳ ಕಾರ್ಯಕರ್ತರು ಈ ತಂಡವನ್ನುಈ ವಿಚಾರವಾಗಿ ಪ್ರಶ್ನಿಸಿದ್ದು, ಬಳಿಕ ಪುತ್ತೂರು ನಗರ ಪೋಲೀಸರಿಗೆ ಮಾಹಿತಿ ನೀಡಿದೆ. ಪೋಲೀಸರು ಎಲ್ಲರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು, ಬಳಿಕ ತಂಡಕ್ಕೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎರಡು ಕೋಮಿನ ಜನ ಪುತ್ತೂರು ನಗರ ಪೋಲೀಸ್ ಠಾಣೆಯ ಬಳಿ ಜಮಾಯಿಸಿದ ಹಿನ್ನಲೆಯಲ್ಲಿ ಪೋಲೀಸರು ಲಾಠಿ ಬೀಸಿ ಎರಡೂ ಗುಂಪುಗಳನ್ನು ಚದುರಿಸಿದ್ದಾರೆ.