ಕುಡಿತದ ಅಮಲಿನಲ್ಲಿ ಕಾರು ಚಲಾಯಿಸಿ ರಿಕ್ಷಾಗೆ ಢಿಕ್ಕಿ ಹೊಡೆದು ಪರಾರಿಯಾದ ಪೊಲೀಸ್ ಅಧಿಕಾರಿ

ಮಂಗಳೂರು ಫೆಬ್ರವರಿ 23: ಕುಡಿತದ ಅಮಲಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ರಿಕ್ಷಾವೊಂದಕ್ಕೆ ಡಿಕ್ಕಿ ಹೊಡೆದು ಮೂವರನ್ನು ಗಾಯಗೊಳಿಸಿದ ಘಟನೆ ನಡೆದಿದೆ.

ಎಎಸ್ಐ ಹಾಗೂ ಇನ್ನೋರ್ವ ಸಿಬಂದಿ ಮಂಗಳೂರು ಸಿಲ್ವರ್ ಗೇಟ್ ಬಳಿ ಕಾರನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ರಿಕ್ಷಾವೊಂದಕ್ಕೆ ಢಿಕ್ಕಿ ಹೊಡೆದಿದ್ದಾರೆ. ರಿಕ್ಷಾದಲ್ಲಿದ್ದ ದಂಪತಿ ಹಾಗೂ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಸಣ್ಣಪುಟ್ಟ ಗಾಯಗಳಾಗಿವೆ

ಕಾರಿನಲ್ಲಿ ಮಧ್ಯದ ಬಾಟಲು ಇದ್ದುದು ಕಂಡು ಬಂತಲ್ಲದೆ ಕಾರಿನ್ನು ಚಲಾಯಿಸುತ್ತಿದ್ದ ಪೊಲೀಸಪ್ಪನಿಗೆ ನಿಲ್ಲಲೂ ಆಗದಷ್ಟು ಮಧ್ಯ ಸೇವಿಸಿದ್ದು ಕಂಡುಬಂದಿದೆ. ಸಮೀಪದಲ್ಲೇ ಹೈ ಟೆನ್ಷನ್ ವೈಯರ್ ಇದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದ್ದರೆ ಹೆಚ್ಚಿನ ಅಪಾಯವಾಗುತ್ತಿತ್ತು.

ಜನರನ್ನು ತಿದ್ದಬೇಕಾದ ಪೊಲೀಸರೇ ಈ ರೀತಿ ಹಾಡು ಹಗಲು ಅಪಘಾತ ನಡೆಸಿ ಪರಾರಿಯಾಗಿರುವುದನ್ನು ಕಂಡು ಸ್ಥಳೀಯರು ಆಕ್ರೋಶ ಭರಿತರಾಗಿ ಸ್ಥಳದಲ್ಲಿ ಜಮಾಯಿಸಿ ಪರಿಶೀಲನೆಗೆ ಬಂದ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.