LATEST NEWS
6 ವಯಸ್ಸಿನ ಹೆಣ್ಣುಮಗಳ ಹೃದಯ 9 ವರ್ಷದ ಬಾಲಕನಿಗೆ ಕಸಿ
6 ವಯಸ್ಸಿನ ಹೆಣ್ಣುಮಗಳ ಹೃದಯ 9 ವರ್ಷದ ಬಾಲಕನಿಗೆ ಕಸಿ
ಇದು ಕರ್ನಾಟಕದ ಮೊಟ್ಟಮೊದಲ ಮಕ್ಕಳ ಹೃದಯ ಕಸಿ
ಮಂಗಳೂರು, ಮಾರ್ಚ್ 10 : ಚಿತ್ರದುರ್ಗ ಮೂಲದ ಆರು ವರ್ಷದ ಬಾಲಕಿಯ ಹೃದಯವನ್ನು, ಆಂಧ್ರಪ್ರದೇಶದ ವಿಶಾಖಪಟ್ಟಣಂನ ಬೋನಿ ಗ್ರಾಮದ 9 ವರ್ಷದ ಬಾಲಕನಿಗೆ ಕಸಿ ಮಾಡಲಾಗಿದೆ.
ಮಿದುಳಿನಲ್ಲಿ ಗಡ್ಡೆ (ಮನಿಂಜಿಯೋಮಾ) ಎಂಬ ರೋಗದಿಂದ ಬಳಲುತ್ತಿದ್ದ ಬಾಲಕಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ, ಬಾಲಕಿಯ ಮಿದುಳು ನಿಷ್ಕ್ರಿಯಗೊಂಡಿತು.
ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ವೈದ್ಯರು ಅಂಗಾಂಗದಾನಕ್ಕೆ ಬಾಲಕಿಯ ಪೋಷಕರ ಮನವೊಲಿಸಿದರು.
ಅಂಗಾಂಗ ದಾನಕ್ಕೆ ಬಾಲಕಿಯ ಮನೆಯವರು ಒಪ್ಪಿಗೆ ಸೂಚಿಸಿದ ನಂತರ ಅವರ ಹೃದಯವನ್ನು ಸಂಗ್ರಹಿಸಿ ಬೆಂಗಳೂರಿನ ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‍ನಲ್ಲಿ ಹೃದಯ ಕವಾಟದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ 9 ವರ್ಷದ ಬಾಲಕನಿಗೆ ಕಸಿ ಮಾಡಲಾಗಿದೆ.
ಎ.ಜೆ. ಆಸ್ಪತ್ರೆಯ ವೈದ್ಯರು ಮಿದುಳು ನಿಷ್ಕ್ರಿಯಗೊಂಡಿರುವು ಖಚಿತಪಡಿಸಿದ ನಂತರ, ಬೆಂಗಳೂರಿನ ವ್ಶೆದ್ಯರತಂಡ, ವಿಮಾನ ಮೂಲಕ ಮಂಗಳೂರಿಗೆ ಬಂದು, ಬಾಲಕಿಯ ಹೃದಯವನ್ನು ಏರ್ ಆ್ಯಂಬುಲೆನ್ಸ್ ಮೂಲಕ 8.03.2018 ರ ಸಂಜೆ 5:30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊಂಡುಹೋದರು.
ವಿಮಾನ ನಿಲ್ದಾಣದಿಂದ 36 ಕಿ.ಮೀ. ದೂರದಲ್ಲಿರುವ ಎಮ್. ಎಸ್. ರಾಮಯ್ಯ ಆಸ್ಪತ್ರೆಗೆ ಸಂಚಾರಿ ಪೋಲೀಸರ ಹಸಿರು ಪಥ ವ್ಯವಸ್ಥೆಯೊಂದಿಗೆ (ಗ್ರೀನ್ ಕಾರಿಡಾರ್) ಕೇವಲ 24 ನಿಮಿಷಗಳಲ್ಲಿ ತಲುಪಿದರು.
ಹೃದಯ ಕಸಿಯನ್ನು ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್ ವೈದ್ಯರಾದ ಯು. ಎಮ್. ನಾಗಮಲ್ಲೇಷ್ , ಹಾರ್ಟ್ ಫೇಲ್ಯೂರ್ ಹಾಗು ಹೃದಯ ಕಸಿ ವಿಭಾಗದ ಡಾ. ರವಿ ಶಂಕರ್ ಶೆಟ್ಟಿ, ಹಿರಿಯ ಕಾರ್ಡಿಯೋವ್ಯಾಸ್ಕುಲರ್ ಹಾಗು ಹೃದಯ ಕಸಿ ಶಸ್ತ್ರಚಿಕಿತ್ಸಕರು, ನಾರಾಯಣ ಹೆಲ್ತ್ ಸಿಟಿಯ ಹಿರಿಯ ಕಾರ್ಡಿಯೋ ತೋರಾಸಿಕ್ ಕಸಿ ಶಸ್ತ್ರಚಿಕಿತ್ಸಕರಾದ ಡಾ. ಜೂಲಿಯೆಸ್ ಪುನ್ನೆನ್, ಡಾ. ಶಿಲ್ಪಾ ರುದ್ರದೇವರು, ಅಸೋಸಿಯೆಟ್ ಕಾರ್ಡಿಯೋವ್ಯಾಸ್ಕುಲರ್ ಶಸ್ತ್ರಚಿಕಿತ್ಸಕರು ಹಾಗು ಡಾ. ಪ್ರಶಾಂತ್ ರಾಮಮೂರ್ತಿ, ಎಮ್. ಎಸ್. ರಾಮಯ್ಯದಲ್ಲಿರುವ ನಾರಾಯಣ ಹಾರ್ಟ್ ಸೆಂಟರ್‍ನ ಅರಿವಳಿಕೆ ತಜ್ಞರು,ಮತ್ತು ತಂಡ ಯಶಸ್ವಿಯಾಗಿ ನೆರವೇರಿಸಿದ್ದಾರೆ.