Connect with us

    DAKSHINA KANNADA

    ಅಯ್ಯಪ್ಪಸ್ವಾಮಿ ಹಾಡಿಗೆ ಅಪಚಾರ ಮಾಡಿದ ಶಾಸಕ ಮೊಯ್ದಿನ್ ಬಾವ ವಿರುದ್ದ ದೂರು ದಾಖಲು

    ಅಯ್ಯಪ್ಪಸ್ವಾಮಿ ಹಾಡಿಗೆ ಅಪಚಾರ ಮಾಡಿದ ಶಾಸಕ ಮೊಯ್ದಿನ್ ಬಾವ ವಿರುದ್ದ ದೂರು ದಾಖಲು

    ಪುತ್ತೂರು, ಮಾರ್ಚ್ 10 : ಹಿಂದುಗಳ ಧಾರ್ಮಿಕ ಶೃದ್ದಾ ಕೇಂದ್ರವಾದ ಶಬರಿಮಲೆ ಅಯ್ಯಪ್ಪ ಸ್ವಾಮಿ ಅವರ ಭಕ್ತಿ ಗೀತೆಯಯನ್ನು ತನ್ನ ರಾಜಕೀಯ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿದ ಶಾಸಕ ಮೊಯಿದಿನ್ ಬಾವ ಅವರ ವಿರುದ್ದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಮೊಯಿದಿನ್ ಬಾವ ಅವರ ವಿರುದ್ದ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ದೂರು ದಾಖಲಿಸಿದ್ದಾರೆ.

    ತಮ್ಮ ಕ್ಷೇತ್ರದಲ್ಲಿ ಮಾಡಿದ ರಾಜಕೀಯ ಸಾಧನೆಯನ್ನು ಪ್ರಚಾರ ಪಡಿಸಲು ಕೋಟ್ಯಾಂತರ ಜನರು ಆರಾಧಿಸುವ ಶಬರಿ ಮಲೆ ಅಯ್ಯಪ್ಪ ಸ್ವಾಮೀ ಕುರಿತ ಭಕ್ತಿ ಗೀತೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ.

    ಹಾಗೂ ಕೋಟ್ಯಾಂತರ ಭಕ್ತರ ನಂಬಿಕೆಯ ಮೇಲೆ ಅವರು ಚೆಲ್ಲಾಟವಾಡಿ ಅವರು ಹಿಂದುಗಳ ಭಾವನೆಯನ್ನು ಘಾಸಿಗೊಳಿಸಿದ್ದಾರೆ ಎಂದು ಪುತ್ತಿಲ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ಮೊಯಿದಿನ್ ಬಾವ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

    ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ಕೋಮು ಸೂಕ್ಷ್ಮಾ ಪ್ರದೇಶಗಳಲ್ಲಿ ಸೌಹಾರ್ದತೆಯನ್ನು ಕೆಡಿಸುವ ಕಾರ್ಯವನ್ನು ಮಾಡುತ್ತಿರುವ ಶಾಸಕ ಹಾಗೂ ಹಾಡಿನಲ್ಲಿ ಭಾಗವಹಿಸಿದ ಇತರರ ಮೇಲೂ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply