National
ಮದುವೆ ನಿರಾಕರಿಸಿದ ವಧುವಿನ ಮನೆಯ ಮೇಲೆ ವರನಿಂದ ಗುಂಡಿನ ದಾಳಿ..!
ಕೇರಳ : ಮದುವೆಯಿಂದ ಹಿಂದೆ ಸರಿದಿದ್ದಕ್ಕೆ ವಧುವಿನ ಮನೆಯ ಮೇಲೆ ವರ ಗುಂಡು ಹಾರಿಸಿದ (Shootout) ಘಟನೆ ಕೇರಳದ ಕೊಟ್ಟಕಲ್ ನಲ್ಲಿ ನಡೆದಿದೆ.
ಗುಂಡು ಹಾರಿಸಿದ ಆರೋಪಿ ಅಬುತ್ವಾಹಿರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಮಲಪ್ಪುರಂನ ಕೊಟ್ಟಕಲ್ ನಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದುಆರೋಪಿ ಅಬುತ್ವಾಹಿರ್ ವಧು ಮನೆಯ ಮೇಲೆ ಬಂದೂಕಿನೊಂದಿಗೆ ದಾಳಿ ಮಾಡಿದ್ದು ಮೂರು ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಗೆ ಮನೆಯ ಕಿಟಕಿ ಗಾಜುಗಳು ಒಡೆದಿವೆ. ಪೊಲೀಸರು ಪ್ರಕರಣ ದಾಖಲು ಮಾಡಿ ಸ್ಥಳ ಪರಿಶೀಲನೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.