Connect with us

  LATEST NEWS

  ದೆಹಲಿಯಲ್ಲಿ ಭಾರಿ ಮಳೆಗೆ ಏರ್‌ಪೋರ್ಟ್ ಚಾವಣಿ ಕುಸಿತಕ್ಕೆ ಓರ್ವ ಬಲಿ,ಸ್ಥಗಿತಗೊಂಡ ವಿಮಾನ ಹಾರಾಟ..!

  ನವದೆಹಲಿ : ಭಾರಿ ಮಳೆಗೆ ವಿಮಾನ ನಿಲ್ದಾಣದ ಚಾವಣಿ ಕುಸಿದು ಓರ್ವ ಸಾವನ್ನಪ್ಪಿದ ಘಟನೆ ನವದೆಹಲಿಯಲ್ಲಿ ಸಂಭವಿಸಿದೆ.

  ರಾಷ್ಟ್ರ ರಾಜಧಾನಿ ನವದೆಹಲಿಯ ವಿಮಾನ ನಿಲ್ದಾಣದ ಟರ್ಮಿನಲ್- 1ರ ಮೇಲ್ಚಾವಣಿಯ ಒಂದು ಭಾಗ  ಭಾರಿ ಮಳೆ ಕಾರಣ ಕುಸಿದು ಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ. ಅನೇಕ ವಾಹನಗಳು ಜಖಂಗೊಂಡಿವೆ.  ಇಂದು ಮುಂಜಾನೆ ಈ ದುರ್ಘಟನೆ ಸಂಭವಿಸಿದೆ. ದುರ್ಘಟನೆಯ ಕಾರಣ ಟರ್ಮಿನಲ್ 1ರಿಂದ ಎಲ್ಲ ನಿರ್ಗಮನಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಚೆಕ್ ಇನ್ ಕೌಂಟರ್‌ಗಳನ್ನು ಸಹ ಮುಚ್ಚಲಾಗಿದೆ ಎಂದು ದಿಲ್ಲಿ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ. ಮಧ್ಯಾಹ್ನ 2 ಗಂಟೆಯವರೆಗೂ ಇದರ ಕಾರ್ಯಾಚರಣೆ ನಿಲ್ಲಿಸಲಾಗಿದೆ.ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ದೇಶೀ ವಿಮಾನಗಳ ಹಾರಾಟ ಮಾತ್ರ ನಡೆಯಲಿದ್ದು, ವಿಪರೀತ ಮಳೆಯ ನಡುವೆ, ಈ ಟರ್ಮಿನಲ್ ಕಾರ್ಯಾಚರಣೆ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply