Connect with us

LATEST NEWS

ಬಂಡುಕೋರರ ವಶವಾದ ಸಿರಿಯಾ – ಸಿರಿಯಾ ಅಧ್ಯಕ್ಷ ಸಂಚರಿಸುತ್ತಿದ್ದ ವಿಮಾನ ನಾಪತ್ತೆ..!!

ಸಿರಿಯಾ ಡಿಸೆಂಬರ್ 08: ಸಿರಿಯಾದಲ್ಲಿ ಬಂಡುಕೋರರು ಹಾಗೂ ಸೇನೆಯ ನಡುವೆ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಸಿರಿಯಾದ ಬಷರ್‌ ಅಲ್‌ ಅಸಾದ್‌ನ ಆಡಳಿತವು ಕೊನೆಯಾಗಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್‌ಗೆ ನುಗ್ಗಿದ್ದಾರೆ ಹಾಗೂ ಅಧ್ಯಕ್ಷ ಬಷರ್‌ ನಾಪತ್ತೆಯಾಗಿದ್ದಾರೆ. ಈ ನಡುವೆ ಅಧ್ಯಕ್ಷ ಪರಾರಿಯಾಗಲು ಬಳಸಿರುವ ವಿಮಾನವನ್ನು ಹೊಡೆದುರುಳಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.


ಬಂಡುಕೋರರ ಹಾಗೂ ಸಿರಿಯಾ ಸೇನೆಯ ಹೋರಾಟದಲ್ಲಿ ಸಿರಿಯಾದ ಸೇನೆಯು ಹೋರಾಟವನ್ನು ಕೈಚೆಲ್ಲಿದ್ದು, ಅಧ್ಯಕ್ಷ ಬಷರ್‌ ಅಲ್‌ ಅಸಾದ್‌ ಅವರ ಆಡಳಿತವು ಕೊನೆಯಾಗಿದೆ ಎಂದು ಸರಕಾರದ ಅಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ. ಸುಮಾರು ಒಂದು ವಾರದಿಂದ ಬಂಡುಕೋರರು ನಡೆಸಿರುವ ಕ್ಷಿಪ್ರ ಕ್ರಾಂತಿಯಲ್ಲಿ ಸಿರಿಯಾದ ಆಡಳಿತವು ಬಷರ್‌ ಕೈತಪ್ಪಿದೆ. ಆತ ರಾಜಧಾನಿ ಡಮಾಸ್ಕಸ್‌ನಿಂದ ಅಜ್ಞಾತ ಸ್ಥಳಕ್ಕೆ ಭಾನುವಾರ ಪರಾರಿಯಾಗಿರುವುದಾಗಿ ವರದಿಯಾಗಿದೆ.


ಬಂಡುಕೋರರು ಡಮಾಸ್ಕಸ್‌ಗೆ ಪ್ರವೇಶಿಸಿದರೂ ಸಿರಿಯಾ ಸೇನೆಯಿಂದ ಯಾವುದೇ ಪ್ರತಿರೋಧಗಳೂ ಎದುರಾಗಲಿಲ್ಲ. ಸಂಭ್ರಮಾಚರಣೆಯಲ್ಲಿರುವ ಬಂಡುಕೋರರ ಗಮನ ಈಗ ಸೆಡ್ನಯಾ ಜೈಲಿನ ಕಡೆಗೆ ಬಿದ್ದಿದೆ. ‘ಸೆರೆಮನೆ ವಾಸಿಗಳನ್ನು ಬಂಧನದಿಂದ ಬಿಡಿಸಿ, ಅವರ ಕೈಗಳಿಗೆ ಹಾಕಿರುವ ಸರಳುಗಳನ್ನು ಬಿಡಿಸಿ ಸ್ವತಂತ್ರಗೊಳಿಸಿ, ಕೊನೆಯಾಗಿರುವ ಅನ್ಯಾಯದ ಪರ್ವವನ್ನು ಸಿರಿಯಾ ಜನರೊಂದಿಗೆ ನಾವು ಸಂಭ್ರಮಿಸುತ್ತೇವೆ’ ಎಂದಿದ್ದಾರೆ.

ಡಮಾಸ್ಕಸ್‌ ಅನ್ನು ಬಂಡುಕೋರರು ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವಾಗಲೇ ಸಿರಿಯಾದ ವಿಮಾನವು ಡಮಾಸ್ಕಸ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಶುರು ಮಾಡಿತು. ಆ ವಿಮಾನವು ಮೊದಲಿಗೆ ಬಷರ್‌ನ ಬಲಿಷ್ಠ ನೆಲೆಯಾದ ಸಿರಿಯಾದ ಕರಾವಳಿ ಭಾಗದತ್ತ ಸಾಗಿತ್ತು. ಆದರೆ, ಮಾರ್ಗ ಮಧ್ಯದಲ್ಲಿ ಯೂಟರ್ನ್ ಮಾಡಿ ವಿರುದ್ಧ ದಿಕ್ಕಿನತ್ತ ಹಾರಾಟ ಮುಂದುರಿಸಿತ್ತು. ಅನಂತರದಲ್ಲಿ ವಿಮಾನವು ಸಾಗಿದ ಹಾದಿಯು ಪತ್ತೆಯಾಗಿಲ್ಲ. ಇದೇ ವಿಮಾನದಲ್ಲಿ ಅಧ್ಯಕ್ಷ ಬಷರ್‌ ಅಲ್ ಅಸಾದ್ ಹಾಗೂ ಸಿರಿಯಾ ಸರಕಾರದ ಪ್ರಮುಖ ಅಧಿಕಾರಿಗಳು, ನಾಯಕರು ಪರಾರಿಯಾಗಿರುವ ಸಾಧ್ಯತೆ ಇರುವುದಾಗಿ ವರದಿಯಾಗಿದೆ. ಆದರೆ ವಿಮಾನ ಟೇಕಾಫ್ ಆದ ಬಳಿಕ ನಾಪತ್ತೆಯಾಗಿರುವ ಸಾಧ್ಯತೆ ಇದ್ದು, ಸಿರಿಯಾ ಅಧ್ಯಕ್ಷನ ಹತ್ಯೆಯಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *