ಬೈರತ್‌ ಡಿಸೆಂಬರ್ 08: ಸಿರಿಯಾ ದೇಶದಲ್ಲಿ ಮತ್ತೊಮ್ಮೆ ಅರಾಜಕತೆ ಸೃಷ್ಠಿಯಾಗಿದೆ. ಸಿರಿಯಾದಲ್ಲಿ ಅಧ್ಯಕ್ಷ ಬಶರ್ ಅಲ್​-ಅಸ್ಸಾದ್ ಆಡಳಿತ ಅಂತ್ಯಗೊಂಡಿದೆ ಎಂದು ಸಿರಿಯಾದ ಬಂಡಾಯ ಗುಂಪು ಹೇಳಿಕೊಂಡಿದೆ. ಬಂಡುಕೋರರು ಡಮಾಸ್ಕಸ್​ ಪ್ರವೇಶಿಸಿದ ಬಳಿಕ ಸಿರಿಯಾ ಅಧ್ಯಕ್ಷ ದೇಶ ತೊರೆದು ಬೇರೆಡೆಗೆ ಪಲಾಯನ ಮಾಡಿದ್ದಾರೆ ಎಂದು ರಾಯ್ಟರ್ಸ್​ ವರದಿ ಮಾಡಿದೆ.


ಈ ಕುರಿತು ‘ಅಸೋಸಿಯೇಟ್‌ ಪ್ರೆಸ್‌’ ಜೊತೆ ಮಾತನಾಡಿದ ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ಮುಖ್ಯಸ್ಥ ರಾಮಿ ಅಬ್ದುಲ್‌ ರೆಹಮಾನ್, ‘ಅಸ್ಸಾದ್ ಅವರು ಇಂದು ಮುಂಜಾನೆ ವಿಮಾನದ ಮೂಲಕ ತೆರಳಿದ್ದಾರೆ’ ಎಂದು ಹೇಳಿದರು. ಅಸ್ಸಾದ್ ದೇಶದಿಂದ ಪಲಾಯನಗೈದಿದ್ದಾರೆ ಎಂಬ ವದಂತಿಯನ್ನು ಸರ್ಕಾರ ನಿರಾಕರಿಸಿದೆ. ಅಸ್ಸಾದ್ ರಷ್ಯಾ ಅಥವಾ ಟೆಹರಾನ್‌ಗೆ ಹೋಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಬಶರ್ ಅಲ್-ಅಸ್ಸಾದ್ ರಷ್ಯಾದ ಸರಕು ವಿಮಾನದಲ್ಲಿ ಸಿರಿಯಾವನ್ನು ತೊರೆದಿದ್ದಾರೆ ಮತ್ತು ಅಸ್ಸಾದ್ ಅವರ ವಿಮಾನವು ರಾಡಾರ್‌ನಿಂದ ಕಾಣೆಯಾಗಿದೆ.

Share Information