Connect with us

    KARNATAKA

    ವಿಷ್ಣುವರ್ಧನ್ ಸ್ಮಾರಕ ಮಾಡಲು ಎಲ್ಲಿ ಹೋದರು ವಿವಾದ ಆಗ್ತಿದೆ – ಜಯಮಾಲಾ

    ವಿಷ್ಣುವರ್ಧನ್ ಸ್ಮಾರಕ ಮಾಡಲು ಎಲ್ಲಿ ಹೋದರು ವಿವಾದ ಆಗ್ತಿದೆ – ಜಯಮಾಲಾ

    ಉಡುಪಿ ನವೆಂಬರ್ 30: ವಿಷ್ಣುವರ್ಧನ್ ಸ್ಮಾರಕ ಮಾಡಲು ಎಲ್ಲಿ ಹೋದರೂ ವಿವಾದ ಆಗ್ತಾ ಇದೆ. ಯಾಕೆ ಅಂತ ಗೊತ್ತಾಗ್ತಿಲ್ಲ ಎಂದು ಸಚಿವೆ ಜಯಮಾಲಾ ತಿಳಿಸಿದ್ದಾರೆ.

    ವಿಷ್ಣುವರ್ಧನ್ ಸ್ಮಾರಕ ವಿಳಂಬವಾಗುತ್ತಿರುವ ಬಗ್ಗೆ ಭಾರತಿ ಅವರ ಬೇಸರ ಸಹಜ. ವಿಷ್ಣುವರ್ಧನ್ ನಮ್ಮನ್ನಗಲಿ ಒಂಭತ್ತು ವರ್ಷ ಆಗಿದೆ. ಭಾರತಿ ಅವರ ಕುಟುಂಬ ಕ್ಕೆ ನಾನು ಬೆಲೆ ಕೊಡ್ತೇನೆ. ಮೈಸೂರಲ್ಲಿ ಸ್ಮಾರಕ ಆಗಲಿ ಎಂದು ಭಾರತಿ ಕೇಳ್ತಿದಾರೆ. ಅಲ್ಲದೆ ಮೈಸೂರು ಅಂದ್ರೆ ವಿಷ್ಣುವರ್ಧನ್ ಗೆ ಪ್ರಾಣ, ವಿಷ್ಣು ಆಸೆ ಏನು ಅನ್ನೋದು ಅವರ ಕುಟುಂಬಕ್ಕೆ ಗೊತ್ತಿರುತ್ತೆ. ಹೀಗಾಗಿ ಮೈಸೂರಲ್ಲೆ ವಿಷ್ಣುವರ್ಧನ್ ಅವರ ಸ್ಮಾರಕ ವಾಗಲಿ ಎಂದು ಹೇಳಿದರು.

    ಸಿಎಂ ಕುಮಾರಸ್ವಾಮಿ ಯವರು ಕೂಡಾ ಸಿನೆಮಾ ರಂಗದವರೇ ಹಾಗಾಗಿ ಭಾರತಿ ಹಾಗೂ ಮುಖ್ಯಮಂತ್ರಿಗಳ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಬರಲ್ಲ. ಭೂಮಿಗೆ ಸಂಬಂದಪಟ್ಟು ಸಣ್ಣ ತಕರಾರು ಇದೆ ಅನಿಸುತ್ತೆ. ವಿಷ್ಣು ಸಮಾಧಿ ವಿಚಾರದಲ್ಲಿ ನಮಗೆಲ್ಲರಿಗೂ ಅಸಹಾಯಕತೆ ಇದೆ. ನಾವೆಲ್ಲರೂ ಭಾರತಿ ಅವರ ಪರ ನಿಲ್ತೀವಿ ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply