Connect with us

LATEST NEWS

ಮಾಡಿದ ಸಾಲ ತೀರಿಸಲು ಹೆತ್ತವರಿಗೆ ಇಲಿ ಪಾಷಾಣ ಬೆರೆಸಿದ ಚಹಾ ಕೊಟ್ಟ ಮಗಳು!

ತ್ರಿಶೂರ್, ಆಗಸ್ಟ್ 26 : ತನ್ನ ಹೆತ್ತ ತಂದೆ-ತಾಯಿಗೆ ಮಗಳೊಬ್ಬಳು ಇಲಿ ಪಾಷಾಣ ಬೆರೆಸಿದ ಚಹಾ ನೀಡಿರುವ ಆಘಾತಕಾರಿ ಪ್ರಕರಣ ಕೇರಳದ ತ್ರಿಶೂರ್ ಜಿಲ್ಲೆಯ ಕುನ್ನಂಕುಲಂನಲ್ಲಿ ಬೆಳಕಿಗೆ ಬಂದಿದೆ. ಈ ಘಟನೆಯಲ್ಲಿ ತಾಯಿ ಮೃತಪಟ್ಟರೆ, ಅದೃಷ್ಟವಶಾತ್​ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಮಗಳನ್ನು ಪೊಲೀಸರು ಬಂಧಿಸಿದ್ದಾರೆ.

ಇಂದುಲೇಖಾ ಎಂಬ ಮಹಿಳೆ ಈ ದುಷ್ಕೃತ್ಯ ಎಸಗಿದ್ದಾಳೆ. ತಾಯಿ ರುಕ್ಮಿಣಿ (57) ಮಗಳಿಂದ ಹತ್ಯೆಯಾದವರು. ಇಂದುಲೇಖಾ 8 ಲಕ್ಷ ರೂಪಾಯಿ ಸಾಲ ಹೊಂದಿದ್ದು, ಇದನ್ನು ತೀರಿಸಲು ತಂದೆ ಹೆಸರಲ್ಲಿದ್ದ ಮನೆ ಮತ್ತು ಜಮೀನನ್ನು ಒತ್ತೆಯಿಡಲು ಸಂಚು ರೂಪಿಸಿದ್ದಳು. ಇದಕ್ಕಾಗಿ ತಂದೆ ಚಂದ್ರನ್​ ಮತ್ತು ತಾಯಿ ರುಕ್ಮಿಣಿ ಜೊತೆಗೆ ಮಗಳು ನಿತ್ಯವೂ ಜಗಳವಾಡುತ್ತಿದ್ದಳಂತೆ.

ಏನಾದರೂ ಮಾಡಿ ಆಸ್ತಿ ಪಡೆಯಬೇಕೆಂಬ ದುರುದ್ದೇಶ ಹೊಂದಿದ್ದ ಇಂದುಲೇಖಾ ಚಹಾದಲ್ಲಿ ತಂದೆ – ತಾಯಿಗೆ ಇಲಿ ಪಾಷಾಣ ಬೆರೆಸಿ ಕೊಟ್ಟಿದ್ದಾಳೆ. ಆದರೆ, ತಂದೆ ಚಂದ್ರನ್ ಚಹಾ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಅದನ್ನು ಕುಡಿದಿರಲಿಲ್ಲ. ತಾಯಿ ಚಹಾ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರು.

ನಂತರ ಇಂದುಲೇಖಾ ಅಸ್ವಸ್ಥಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು, ತನ್ನ ತಾಯಿ ಫುಡ್ ಪಾಯ್ಸನಿಂಗ್​ನಿಂದ ಬಳಲುತ್ತಿದ್ದಾರೆ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ತಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹದಲ್ಲಿ ಇಲಿ ವಿಷ ಬೆರೆತಿರುವುದು ಪತ್ತೆಯಾಗಿದೆ.

ಇತ್ತ, ಇಂದುಲೇಖಾ ಬಗ್ಗೆ ತಂದೆಗೆ ಅನುಮಾನ ಬಂದಿದ್ದು, ಆಕೆಯ ವರ್ತನೆ ಹಾಗೂ ಜಗಳದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸರು ಇಂದುಲೇಖಾಳನ್ನು ವಿಚಾರಣೆಗೊಳಪಡಿಸಿದ್ದು, ಆಗ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಆಸ್ತಿ ಪಡೆಯಲೆಂದೇ ಪೋಷಕರನ್ನು ಕೊಲೆ ಮಾಡಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಅಲ್ಲದೇ, ಪೋಷಕರಿಗೆ ನೀಡುತ್ತಿದ್ದ ಆಹಾರದಲ್ಲಿ ಕೆಲ ಸಮಯದಿಂದ ಮಾತ್ರೆಗಳನ್ನು ಇಂದುಲೇಖಾ ಬೆರೆಸುತ್ತಿದ್ದಳು. ಇಲಿಪಾಷಾಣದ ಬಗ್ಗೆ ಇಂಟರ್​ನೆಟ್​​ನಲ್ಲಿ ಹುಡುಕಾಟ ನಡೆಸಿದ್ದಳು ಎಂದು ಪೊಲೀಸರು ಹೇಳಿದ್ದಾಳೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *