Connect with us

    FILM

    ‘ದೆವ್ವ’ವಾಗಿ ಕಾಡಲಿದ್ದಾಳೆ ಕರಾವಳಿಯ ಬೆಡಗಿ ಪೂಜಾ ಹೆಗ್ಡೆ..!!?

    ಸಾಲು ಸಾಲು ಸಿನಿಮಾಗಳಲ್ಲಿ  ಸೋಲನ್ನು ಕಂಡಿರುವ ಕರಾವಳಿ ಬೆಡಗಿ ಬಹುಭಾಷಾ ತಾರೆ  ಪೂಜಾ ಹೆಗ್ಡೆ (Pooja Hegde) ಮುಂಬರುವ ದಿನಗಳಲ್ಲಿ ‘ದೆವ್ವ’ ವಾಗಿ (ghost) ಕಾಡಲಿದ್ದಾರೆ. 

    ಮುಂಬೈ :  ಸಾಲು ಸಾಲು ಸಿನಿಮಾಗಳಲ್ಲಿ  ಸೋಲನ್ನು ಕಂಡಿರುವ ಕರಾವಳಿ ಬೆಡಗಿ ಬಹುಭಾಷಾ ತಾರೆ ಪೂಜಾ ಹೆಗ್ಡೆ (Pooja Hegde) ಮುಂಬರುವ ದಿನಗಳಲ್ಲಿ ‘ದೆವ್ವ’ ವಾಗಿ (ghost) ಕಾಡಲಿದ್ದಾರೆ.

    ಪಡ್ಡೆ ಹುಡುಗರ ಮನದನ್ನೆಯಾಗಿದ್ದ ಪೂಜಾ ಹೆಗ್ಡೆ ಇದೀಗ ದ್ವೆವ್ವವಾಗಿ  ಕಾಡಲಿದ್ದು ಈ  ಬಗ್ಗೆ  ದಿಟ್ಟ ನಿರ್ಧಾರವೊಂದನ್ನು ಕೈಗೊಂಡು ಎಲ್ಲರನ್ನು ಹುಬ್ಬೇರಿಸಿದ್ದಾರೆ. ಈ ಮೂಲಕ ಹೊಸ ಬಗೆಯ ಪಾತ್ರಗಳನ್ನು ಮಾಡಲು ಮುಂದಾಗಿದ್ದಾರೆ. ತಮಿಳಿನ ಹೊಸ ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ನಟಿಸಲು ಪೂಜಾ ಹೆಗ್ಡೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಪೂಜಾಗೆ ಕೆರಿಯರ್‌ನಲ್ಲಿ ಹೇಳಿಕೊಳ್ಳುವಂತಹ ಸಕ್ಸಸ್ ಸಿಗುತ್ತಿಲ್ಲ. ಆದರೆ ವಿಶೇಷ ಅಂದ್ರೆ ಅವರ ಬೇಡಿಕೆಯೇನು ಕಮ್ಮಿಯಾಗಿಲ್ಲ. ಸತತ ಸೋಲಿನ ಬಳಿಕವೂ ಪೂಜಾ ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ತಮಿಳಿನಲ್ಲಿ ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

    ಖ್ಯಾತ ನಟ ರಾಘವ್ ಲಾರೆನ್ಸ್ (Raghava Lawrence) ಜೊತೆ ನಟಿ ಸಿನಿಮಾ ಮಾಡಲಿದ್ದಾರೆ. ‘ಕಾಂಚನಾ ಪಾರ್ಟ್ 4’ನಲ್ಲಿ (Kanchana 4) ದೆವ್ವದ (Ghost) ಪಾತ್ರಕ್ಕೆ ಓಕೆ ಎಂದಿದ್ದಾರೆ. ದೆವ್ವ ಪಾತ್ರವಾಗಿದ್ದರೂ ನಟನೆಗೆ ಸ್ಕೋಪ್ ಇದೆ ಎಂಬ ಕಾರಣಕ್ಕೆ ನಟಿ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿಂದೆ ಎಂದೂ ಮಾಡಿರದ ಪಾತ್ರದಲ್ಲಿ ನಟಿಸಲು ಪೂಜಾ ತಯಾರಿ ಮಾಡಿಕೊಳ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply