Connect with us

    KARNATAKA

    ‘ಯಾಕ್ರಿ ಹಿಂಗೆ ಗಾಡಿ ಚಲಾಯಿಸ್ತೀರಾ ?’ ಪ್ರಶ್ನಿಸಿದ ಆಟೋ ಡ್ರೈವರ್ ಮೇಲೇರಿ ಹೋದ ಯುವತಿ..!

    ಬೆಂಗಳೂರು :  ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸುತ್ತಿದ್ದ ಯುವತಿಯನ್ನು ಕೇಳಕ್ಕೆ ಹೋದ ಆಟೋ ಚಾಲಕನಿಗೆ ಹಿಗ್ಗಾ ಮುಗ್ಗ ಹಲ್ಲೆ ನಡಿಸಿದ ಘಟನೆ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

    ಯುವತಿ ಕಂಠ ಪೂರ್ತಿ ಕುಡಿದು ನಿಲ್ಲಾಗದಂತಹ ಸ್ಥಿತಿಯಲ್ಲಿದ್ದು ರಸ್ತೆ ಮಧ್ಯೆ ಅಡ್ಡಾದಿಡ್ಡಿಯಾಗಿ ಕಾರು ಓಡಿಸಿದ್ದಾಳೆ. ಇದನ್ನು ಪ್ರಶ್ನೆ ಮಾಡಿದ ಆಟೋ ಡ್ರೈವರ್​ ನಿಶಾಂತ್​ಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಅಷ್ಟೇ ಅಲ್ಲದೆ ಕಾರ್ ನಿಲ್ಲಿಸಿ ಅಟೋ ಡ್ರೈವರ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾಳೆ.

    ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಸಾಲದಕ್ಕೆ ಯುವಕನ ಮೈ-ಕೈ ಪರಚಿ ಯುವತಿ ಗಾಯಗೊಳಿಸಿದ್ದಾಳೆ. ರಸ್ತೆಯಲ್ಲಿ ಯುವಕನ ಕೋಲಾರ್ ಹಿಡಿದು ಥಳಿಸಿ ಅಹಂಕಾರ ಮೆರೆದಿದ್ದಾಳೆ .ಬಳಿಕ ಯುವಕ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾಳೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಯುವತಿಯ ಮೇಲೆ ಪ್ರಕರಣ ದಾಖಲು ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply