KARNATAKA
ಕಾಸರಗೋಡು ಉಪ್ಪಳದಲ್ಲಿ ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆ..!
ಕಾಸರಗೋಡು: ಎಟಿಎಂಗೆ ಹಣ ತುಂಬಿಸಲು ಬಂದಿದ್ದ ವಾಹನದಿಂದ 50 ಲಕ್ಷ ರೂ. ದರೋಡೆಗೈದ ಘಟನೆ ಬುಧವಾರ ಮಧ್ಯಾಹ್ನ ಕಾಸರಗೋಡಿನ ಉಪ್ಪಳಪೇಟೆಯಲ್ಲಿ ನಡೆದಿದೆ.
ವಾಹನದ ಗಾಜನ್ನು ಒಡೆದು 50 ಲಕ್ಷ ಪೆಟ್ಟಿಗೆಯನ್ನೇ ಹಣ ದರೋಡೆ ಮಾಡಿದ್ದಾರೆ. ಉಪ್ಪಳ ಪೇಟೆಯಲ್ಲಿರುವ ಆಕ್ಸಿಸ್ ಬ್ಯಾಂಕ್ ನ ಎ ಟಿ ಎಂ ಮೆಷಿನ್ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭ ಈ ಘಟನೆ ನಡೆದಿದೆ. ವಾಹನದಲ್ಲಿದ್ದ ನೌಕರರು ವಾಹನ ನಿಲ್ಲಿಸಿ ಎಟಿಎಂ ಮೆಷಿನ್ ತೆರೆದು ವಾಹನದಲ್ಲಿದ್ದ ಹಣದ ಬಾಕ್ಸನ್ನು ತೆಗೆದುಕೊಂಡು ಹೋಗಲು ಮರಳಿ ಬಂದಾಗ ವಾಹನದ ಗಾಜು ಹುಡಿಯಾದ ಸ್ಥಿತಿಯಲ್ಲಿ ಕಂಡುಬಂದಿದೆ. ಪರಿಶೀಲಿಸಿದಾಗ ಸುಮಾರು 50 ಲಕ್ಷ ರೂ. ಇದ್ದ ಬಾಕ್ಸ್ ನಾಪತ್ತೆಯಾಗಿತ್ತು. ಖಾಸಗಿ ಏಜೆನ್ಸಿಯ ವಾಹನದಲ್ಲಿ ಹಣವನ್ನು ತಂದು ಎಟಿಎಂ ಗೆ ತುಂಬಿಸಲಾಗುತ್ತಿತ್ತು. ವಾಹನದ ಗಾಜನ್ನು ಒಡೆದು ಕೃತ್ಯ ನಡೆಸಲಾಗಿದೆ. ಮಂಜೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದು , ವಾಹನದ ಚಾಲಕ ಮತ್ತು ನೌಕರನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಮೀಪದ ಸಿಸಿಟಿವಿ ಕ್ಯಾಮರಾ ಮೂಲಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
You must be logged in to post a comment Login