KARNATAKA
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ 2024-25ನೇ ಸಾಲಿನ ವಾರ್ಷಿಕ ಆದಾಯ ₹155.95 ಕೋಟಿ

ಸುಬ್ರಹ್ಮಣ್ಯ, ಏಪ್ರಿಲ್ 17: ದಕ್ಷಿಣ ಕನ್ನಡ ಜಿಲ್ಲೆಯ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಮತ್ತೆ ತಾನೇ ರಾಜ್ಯಕ್ಕೆ ಶ್ರೀಮಂತ ದೇವಸ್ಥಾನ ಎಂಬುದನ್ನು ಸಾಬೀತುಪಡಿಸಿದೆ.
2024-25ನೇ ಸಾಲಿನ ವಾರ್ಷಿಕ ಆದಾಯ ರೂ.155.95 ಕೋಟಿ (155,95,19,567)ರೂ. ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷಕ್ಕಿಂತ 9.94 ಕೋಟಿ ರೂ. ಏರಿಕೆಯಾಗಿದೆ. ಕಳೆದ ವರ್ಷ 146.01 ಕೋಟಿ ಆಗಿತ್ತು. ಸರ್ಪ ಸಂಸ್ಕಾರ ಸೇರಿದಂತೆ ವಿವಿಧ ಸೇವೆ ಹಾಗೂ ಇತರ ಮೂಲಗಳಿಂದ ಒಟ್ಟು ಆದಾಯ 155. 95 ಕೋಟಿ ರೂ. ಬಂದಿದ್ದು, ಖರ್ಚು 79.82 ಕೋಟಿ ರೂ (79,82,73,197) ಆಗಿದೆ.

ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮದಾಯ ದತ್ತಿ ಇಲಾಖೆಯಡಿ ಈ ದೇವಸ್ಥಾನ ಬರಲಿದೆ. ನಾಗಾರಾಧನೆಯ ಪ್ರಮುಖ ಕ್ಷೇತ್ರವಾಗಿದ್ದು, ರಾಜ್ಯದವರಲ್ಲದೇ ಹೊರ ರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸುತ್ತಾರೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಆದಾಯ ಗಳಿಕೆಯಲ್ಲಿ ಕಳೆದ ವರ್ಷವೂ ಪ್ರಥಮ ಸ್ಥಾನದ ಲ್ಲಿತ್ತು. ಎರಡನೇ ಸ್ಥಾನಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ್ದಾಗಿತ್ತು. ಈ ವರ್ಷವೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವೇ ಅತ್ಯಧಿಕ ಆದಾಯ ಸಂಗ್ರಹದ ದೇವಸ್ಥಾನವಾಗುವ ಸಾಧ್ಯತೆ ಇದೆ. ಇಲಾಖೆಯಿಂದ ಅಧಿಕೃತ ಪಟ್ಟಿ ಬಿಡುಗಡೆ ಬಳಿಕ ಮಾಹಿತಿ ಲಭ್ಯವಾಗಲಿದೆ.
ವರ್ಷದಿಂದ ವರ್ಷಕ್ಕೆ ದೇವಸ್ಥಾನದ ಆದಾಯ ಹೆಚ್ಚುತ್ತಿದ್ದು, 2020-21ರಲ್ಲಿ 68.94 ಕೋಟಿ ರೂ., 2021-22ರಲ್ಲಿ 72.73 ಕೋಟಿ ರೂ., 2022-23ರಲ್ಲಿ 123 ಕೋಟಿ ರೂ., 2023-24 ರಲ್ಲಿ 146.01 ಕೋಟಿ ರೂ. ಗಳ ಆದಾಯ ಬಂದಿತ್ತು. 2011-12 ರಲ್ಲಿ ದೇವಸ್ಥಾನದ ಆದಾಯ 56.24 ಕೋಟಿ ರೂ. ಗಳಾಗಿದ್ದವು.
2 Comments