Connect with us

    LATEST NEWS

    ಕಳ್ಳತನಕ್ಕೆ ಬಂದು ದೇವಾಲಯದ ಆವರಣಗಳಲ್ಲಿ ಮಲಮೂತ್ರ ವಿಸರ್ಜಿಸಿ ವಿಕೃತಿ ಮೆರೆದೆ ಕಿಡಿಗೇಡಿಗಳು ಆರೆಸ್ಟ್

    ಮಂಗಳೂರು ಫೆಬ್ರವರಿ 1: ದಕ್ಷಿಣಕನ್ನಡ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಕಳ್ಳತನಕ್ಕೆ ಪ್ರಯತ್ನಿಸಿ ನಂತರ ಮಲಮೂತ್ರ ವಿಸರ್ಜಿಸಿ ವಿಕೃತಿ ಮೆರೆದೆ ಇಬ್ಬರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.


    ಬಂಧಿತರನ್ನು ತಲಪಾಡಿ ಕೊಮರಂಗಳ ನಿವಾಸಿ ಮಹಮ್ಮದ್ ಸೊಹೈಲ್‌(19) ಮತ್ತು ತಲಪಾಡಿಯ ಪಿಲಿಕೂರು ನಿವಾಸಿ ನಿಜಾಮುದ್ದೀನ್‌(21) ಎಂದು ಗುರುತಿಸಲಾಗಿದ್ದು, ಆರೋಪಿಗಳು ಕೊಣಾಜೆಯ ಗೋಪಾಲಕೃಷ್ಣ ಭಜನಾ ಮಂದಿರದ ಒಳಗೆ ಮಲ, ಮೂತ್ರ ವಿಸರ್ಜಿಸಿ ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್‌ ಶಶಿಕುಮಾರ್ ಹೇಳಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿವಿಧ ಕಡೆಗಳಲ್ಲಿ ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ದೃಶ್ಯಾವಳಿಗಳನ್ನು ಸಂಗ್ರಹಿಸಿ ಆರೋಪಿಗಳ ಜಾಡು ಹಿಡಿದು ಹೋದ ಪೊಲೀಸರಿಗೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಕಾಣಿಕೆ ಹುಂಡಿಯಿಂದ ಹಣ ಕಳವು ಮಾಡಲು ಹೋಗಿದ್ದ ವೇಳೆ ಅಲ್ಲಿ ಹಣವಾಗಲೀ, ಬೆಳೆಬಾಳುವ ಸೊತ್ತುಗಳಾಗಲೀ ಸಿಗದೇ ಇದ್ದಾಗ ಡಬ್ಬಿ ಒಡೆದು ಇದನ್ನು ಬೇರೆ ಯಾರೋ ಮಾಡಿದ್ದಾರೆ ಎಂಬಂತೆ ತನಿಖೆ ಹಾದಿ ತಪ್ಪಿಸಲು ಯತ್ನಿಸಿದ್ದಾರೆ. ಬಳಿಕ ಮಲ, ಮೂತ್ರ ವಿಸರ್ಜಿಸಿ ಹುಚ್ಚರ ಕೃತ್ಯ ಎಂಬಂತೆ ಸನ್ನಿವೇಶವನ್ನು ಸೃಷ್ಟಿಸಿದ್ದಾರೆ ಎಂದು ವಿವರಿಸಿದರು.

    ತಂಡದಲ್ಲಿ ಇನ್ನೂ ಆರು ಮಂದಿ ಆರೋಪಿಗಳಿದ್ದು, ಕೊಣಾಜೆ, ಉಳ್ಳಾಲ, ಕಂಕನಾಡಿ ಗ್ರಾಮಾಂತರ, ಪುಂಜಾಲ ಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸೇರಿದಂತೆ ಒಟ್ಟು 9 ಕಡೆಗಳಲ್ಲಿ ಕಳವು ಕೃತ್ಯ ಎಸಗಿದ್ದಾರೆ. ಇವುಗಳಲ್ಲಿ ಐವರು ದೇವಸ್ಥಾನದ ಹುಂಡಿ ಕಳವು ಮಾಡಿದ್ದಾರೆ. ಕೊಣಾಜೆ ಮಂದಿರದಲ್ಲಿ ಕೃತ್ಯ ಎಸಗುವ ಸ್ವಲ್ಪ ದಿನಗಳ ಮುಂಚೆ ಸಮೀಪದ ದೈವಸ್ಥಾನದ ಕಾಣಿಕೆ ಹುಂಡಿ ಕಳವು ಮಾಡಿದ್ದರು. ಬಳಿಕ ಗೋಪಾಲಕೃಷ್ಣ ದೇವಸ್ಥಾನದ ಬಳಿ ಈ ಹುಂಡಿಯನ್ನು ಎಸೆದು, ಅದೇ ದಿನ ಗೋಪಾಲಕೃಷ್ಣ ಮಂದಿರಕ್ಕೂ ನುಗ್ಗಲು ಯೋಚಿಸಿದ್ದರು. ತಲಪಾಡಿ ಪಿಲಿಕೂರು ಎಂಬಲ್ಲಿ ಸಿಕ್ಕಿದ ಸಿಸಿಟಿವಿ ವಿಡಿಯೋ ಆಧರಿಸಿ ಇವರನ್ನು ಸಂಶಯದ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇವರ ಕೃತ್ಯ ಬಯಲಾಗಿದೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *