Connect with us

LATEST NEWS

ಕಾರ್ಕಳದ ಆನೆಕೆರೆ ಕಾಲುವೆಯಲ್ಲಿ ಅನಾಥ ಕಾರು ಪತ್ತೆ

ಉಡುಪಿ ಫೆಬ್ರವರಿ 1 : ಕಾರ್ಕಳದ ಆನೆಕೆರೆ ಕಾಲುವೆಗೆ ಕಾರೊಂದು ಉರುಳಿ ಬಿದ್ದಿದ್ದು, ಅಪಘಾತ ಹಾಗೂ ಕಾರಿಗೆ ಸಂಬಂಧಪಟ್ಟವರ ಬಗ್ಗೆ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.


ಕೇರಳ ನೊಂದಾಯಿತ ಕಾರೊಂದು ಕಾರ್ಕಳದ ಆನೆಕೆರೆ ಕಾಲುವೆಗೆ ಉರುಳಿ ಬಿದ್ದಿದ್ದು, ನಿನ್ನೆ ತಡ ರಾತ್ರಿ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸ್ಥಳೀಯ ಹೊಟೇಲ್ ಒಂದರಲ್ಲಿ ನಿನ್ನೆ ರಾತ್ರಿ ಕೇರಳದ ವಿಧ್ಯಾರ್ಥಿಗಳು ಪಾರ್ಟಿ ನಡೆಸಿದ್ದರು ಎಂದು ಹೇಳಲಾಗಿದ್ದು, ರಾತ್ರಿ ಮನೆಗೆ ಹೊರಟ ಸಂದರ್ಭ ನಿಯಂತ್ರಣ ತಪ್ಪಿ ಕಾರು ಕಾಲುವೆಗೆ ಉರುಳಿ ಬಿದ್ದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಆದರೆ ಕಾರಿನಲ್ಲಿದ್ದವರಿಗೆ ಗಾಯಗಳಾಗಿದೆಯಾ ಇನ್ನು ತಿಳಿದು ಬಂದಿಲ್ಲ, ಅಲ್ಲದೆ ಕಾರಿನಲ್ಲಿದ್ದವರು ಕಾರನ್ನು ಏಕೆ ಬಿಟ್ಟು ಹೋಗಿದ್ದಾರೆ ಎನ್ನುವುದು ಪ್ರಶ್ನೆಯಾಗಿ ಉಳಿದಿದೆ. ಸ್ಥಳಕ್ಕೆ ಆಗಮಿಸಿದ ಕಾರ್ಕಳ ಪೊಲೀಸರು ಕಾರನ್ನು ಮೇಲೆತ್ತಲು ಕ್ರಮಕೈಗೊಂಡಿದ್ದಾರೆ.