Connect with us

LATEST NEWS

ಸಮುದ್ರ ಪಾಲಾಗುತ್ತಿದ್ದ ಒಂದೇ ಕುಟುಂಬದ ನಾಲ್ವರ ರಕ್ಷಣೆ

ಉಳ್ಳಾಲ: ಸಮುದ್ರದಲ್ಲಿ ಆಟವಾಡುತ್ತಿದ್ದ ಸಂದರ್ಭ ಸಮುದ್ರಪಾಲಾಗುತ್ತಿದ್ದ ಒಂದೇ ಕುಟುಂಬದ ನಾಲ್ವರನ್ನು ರಕ್ಷಿಸಿದ ಘಟನೆ ಉಳ್ಳಾಲದ ಮೊಗವೀರಪಟ್ನ ಸಮುದ್ರ ತೀರದಲ್ಲಿ ನಡೆದಿದೆ.


ಧಾರವಾಡ ನಿಜಾಮುದ್ದೀನ್ ಕಾಲನಿ ನಿವಾಸಿ ಮೊಹಮ್ಮದ್ ಗೌಸ್, ರೇಷ್ಮಾ ದಂಪತಿ ಸಹಿತ ಮಕ್ಕಳಾದ ನಿಜಾಮ್, ನಿಷ್ಮಾ ಎಂಬುವರು ರಕ್ಷಿಸಲ್ಪಟ್ಟವರು. ಉಳ್ಳಾಲ ದರ್ಗಾ ಸಂದರ್ಶನಕ್ಕೆ ದಂಪತಿ ಮೂವರು ಮಕ್ಕಳೊಂದಿಗೆ ಆಗಮಿಸಿದ್ದರು. ಸಮುದ್ರ ಕಿನಾರೆಯಲ್ಲಿ ಆಟವಾಡುತ್ತಿದ್ದ ಸಂದರ್ಭ ಅಲೆಗಳ ರಭಸಕ್ಕೆ ನಾಲ್ವರೂ ಸಮುದ್ರಪಾಲಾಗಿದ್ದರು. ಇದನ್ನು ಗಮನಿಸಿದ ಉಳ್ಳಾಲ ಶಿವಾಜಿ ಜೀವರಕ್ಷಕ ಈಜುಗಾರರ ಸಂಘ ಸದಸ್ಯ ಕುನಾಲ್ ಅಮೀನ್, ಕೋಸ್ಟ್‌ಗಾರ್ಡ್ ಸಿಬ್ಬಂದಿ ಕಿರಣ್ ಸಮುದ್ರಕ್ಕೆ ಧುಮುಕಿ ರಕ್ಷಿಸಿದ್ದಾರೆ.