Connect with us

FILM

ಸೋನು ಸೂದ್‍ಗೆ ದೇವಾಲಯ ಕಟ್ಟಿದ ಅಭಿಮಾನಿಗಳು…!

ಹೈದ್ರಾಬಾದ್, ಡಿಸೆಂಬರ್ 22: ಕೋವಿಡ್ ಸಮಯದಲ್ಲಿ ನಿರ್ಗತಿಕರ ಬಾಳಿನ ಆಶಾಕಿರವಾಣವಾದ ರಿಯಲ್ ಹೀರೊ ಸೋನು ಸೂದ್ ಹಲವರ ಪಾಲಿನ ದೇವರಾಗಿದ್ದಾರೆ. ಹೀಗಿರುವಾಗ ತೆಲಂಗಾಣದಲ್ಲಿ ಅವರ ಅಭಿಮಾನಿಗಳು ಸೋನು ಸೂದ್ ಅವರ ಪ್ರತಿಮೆ ಇಟ್ಟು ದೇವಸ್ಥಾನವನ್ನು ಕಟ್ಟಿದ್ದಾರೆ. ಕೊರೋನಾ ಲಾಕ್‍ಡೌನ್ ವೇಳೆಯಲ್ಲಿ ನಟ ಮತ್ತು ಲೋಕೋಪಕಾರಿ ಸೋನು ಸೂದ್ ಅವರ ಮಾನವೀಯ ಕಾರ್ಯವನ್ನು ಅರಿತುಕೊಂಡು, ತೆಲಂಗಾಣದ ಸಿದ್ದಿಪೇಟೆ ಜಿಲ್ಲಾ ಅಧಿಕಾರಿಗಳ ಸಹಾಯದಿಂದ ದುಬ್ಬಾ ತಾಂಡಾ ಗ್ರಾಮದ ಸ್ಥಳೀಯ ಜನರು ದೇವಾಲಯವನ್ನು ನಿರ್ಮಿಸಿದ್ದಾರೆ. ಇವರು ಸಹಾಯವನ್ನು ನೆನೆದು ಸೋನು ಸೂದ್ ಪ್ರತಿಮೆಯನ್ನು ಪೂಜಿಸುತ್ತಿದ್ದಾರೆ.

ಸ್ಥಳೀಯ ಜನರ ಸಮ್ಮುಖದಲ್ಲಿ ದೇವಾಲಯದ ಉದ್ಘಾಟನೆ ಮಾಡಲಾಗಿದೆ. ಮಹಿಳೆಯರು ಸಾಂಪ್ರದಾಯಿಕ ಉಡುಪನ್ನು ಧರಿಸಿ ಜಾನಪದ ಗೀತೆಗಳನ್ನು ಹಾಡುತ್ತಾ ಸೋನು ಸೂದ್ ಪ್ರತಿಮೆಗೆ ಆರತಿ ಮಾಡಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಸೂದ್ ಅವರು ಸಾರ್ವಜನಿಕರಿಗಾಗಿ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆ ಮತ್ತು ಈಗಲೂ ಮಾಡುತ್ತಿದ್ದಾರೆ ಎಂದು ಜಿಲ್ಲಾ ಪರಿಷತ್ ಸದಸ್ಯ ಗಿರಿ ಕೊಂಡಾಲ್ ರೆಡ್ಡಿ ಉದ್ಘಾಟನೆ ವೇಳೆ ಹೇಳಿದ್ದಾರೆ.ಲಾಕ್‌ಡೌನ್ ಸಮಯದಲ್ಲಿ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ತೆರಳಲು ಸಾಧ್ಯವಾಗದೆ ಅಸಾಹಯಕ ಸ್ಥಿತಿಯಲ್ಲಿದ್ದಾಗ ಸೋನು ಸೂದ್ ಬಡವರು, ನಿರ್ಗತಿಕರು, ವಲಸೆ ಕಾರ್ಮಿಕರಿಗೆ ಸಹಾಯ ಮಾಡುವ ಮೂಲಕವಾಗಿ ಮಾನವೀಯತೆ ಮೆರೆದಿದ್ದರು.

ಲಾಕ್‌ಡೌನ್ ಸಮಯದಲ್ಲಿ ಮಾಡಿದ ಸಹಾಯಕ್ಕೆ ರಿಯಲ್ ಹೀರೋ ಆಗಿದ್ದಾರೆ. ಮಾನವೀಯತೆಗೆ ಮತ್ತೊಂದು ಹೆಸರೆ ಸೋನು ಸೂದ್ ಆಗಿದ್ದಾರೆ. ಯಾವುದೇ ರೀತಿಯ ಸಮಸ್ಯೆಗಳು ಎದುರಾದರೂ ಬಗೆಹರಿಸುತ್ತಾರೆ. ಭಾರತದಲ್ಲಿರುವ ಒಬ್ಬನೇ ದೇವರು ಎಂದರೆ ಸೋನು ಸೂದ್, ತನ್ನ ಒಳ್ಳೆಯ ಕಾರ್ಯಗಳಿಂದ ದೇವರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗಿ ನಾವು ಸೋನು ಸೂದ್‌ಗಾಗಿ ದೇವಾಲಯವನ್ನು ನಿರ್ಮಿಸಿದ್ದೇವೆ ಎಂದು ಇಲ್ಲಿನ ಸ್ಥಳಿಯರು ಹೇಳಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *