Connect with us

    FILM

    ಇಂಗ್ಲೆಂಡ್ ನಿಂದ ಬಂದರೂ ಕ್ವಾರಂಟೈನ್ ಆಗದ ನಟಿ ಹರ್ಷಿಕಾ ಪೂಣಚ್ಚ….!!

    ಬೆಂಗಳೂರು: ಬ್ರಿಟನ್ ನಲ್ಲಿ ಕೊರೊನಾ ವೈರಸ್ ನ ರೂಪಾಂತರಗೊಂಡ ವೈರಸ್ ಪತ್ತೆಯಾಗಿದ್ದು, ಇಡೀ ವಿಶ್ವವನ್ನೆ ಆತಂಕಕ್ಕೀಡು ಮಾಡಿದೆ. ಈ ನಡುವೆ ರೂಪಾಂತರಗೊಂಡ ಕೊರೊನಾ ವೈರಸ್ ಬ್ರಿಟನ್​ನಲ್ಲಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ವಿದೇಶ ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಟ್ಟಿದೆ.


    ಈಗಾಗಲೇ ರಾಜ್ಯ ಸರಕಾರ ವಿದೇಶದಿಂದ ಆಗಮಿಸುವವರಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, 14 ದಿನಗಳ ಹಿಂದೆ ವಿದೇಶದಿಂದ ಆಗಮಿಸಿದವರಿಗೆ ಕೊರೊನಾ ಪರೀಕ್ಷೆ ಕಡ್ಡಾಯಗೊಳಿಸಿದೆ. ಅಲ್ಲದೆ ಕ್ವಾರಂಟೈನ್ ಒಳಗಾಗಬೇಕೆಂದು ತಿಳಿಸಿದೆ. ಹೀಗಿರುವಾಗ ಇತ್ತೀಚೆಗಷ್ಟೇ ವಿದೇಶದ ಪ್ರವಾಸ ಮುಗಿಸಿ ಬಂದಿರುವ ಸ್ಯಾಂಡಲ್​ವುಡ್ ನಟಿ ಹರ್ಷಿಕಾ ಪೂಣಚ್ಚ ಕ್ವಾರಂಟೈನ್​ಗೆ ಒಳಗಾಗದಿರುವುದು ಗಮನಕ್ಕೆ ಬಂದಿದೆ.

    ಹರ್ಷಿಕಾ ಲಂಡನ್​ನಿಂದ ಕಳೆದವಾರಷ್ಟೇ ಬೆಂಗಳೂರಿಗೆ ಬಂದಿದ್ದಾರೆ. ಲಂಡನ್​ನ ಬೀದಿ ಬೀದಿಯಲ್ಲಿ ಹರ್ಷಿಕಾ ಸುತ್ತಾಡಿದ್ದು, ಅಲ್ಲಿಂದ ತವರಿಗೆ ಮರಳಿದ ಮೇಲೆ ನಟಿ ಕ್ವಾರಂಟೈನ್ ಕೂಡ ಆಗಿಲ್ಲ.


    ಭೋಜ್ ಪುರಿ ಚಿತ್ರದ ಶೂಟಿಂಗ್ ಗಾಗಿ ತೆರಳಿದ್ದ ಹರ್ಷಿಕಾ ಚಿತ್ರೀಕರಣಕ್ಕಾಗಿ ಲಂಡನ್ ನಲ್ಲಿ ಬೀಡು ಬಿಟ್ಟಿದ್ದರು. ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಚಿತ್ರೀಕರಣ ನಡೆದಿದ್ದ, ಪವನ್ ಸಿಂಗ್ ಈ ಸಿನೆಮಾದ ಹಿರೋ ಆಗಿ ನಟಿಸಿದ್ದಾರೆ. ಇದು ಹರ್ಷಿಕಾ ಅವರ ಮೊದಲ ಭೋಜ್ ಪುರಿ ಸಿನೆಮಾ ಆಗಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply