ವಿಧ್ಯಾರ್ಥಿನಿಯರ ಎದುರೇ ಬಡಿದಾಡಿಕೊಂಡ ಶಿಕ್ಷಕರು

ಸುಳ್ಯ ಅಕ್ಟೋಬರ್ 12 ವಿದ್ಯಾರ್ಥಿನಿಯರ ಎದುರೇ ಹಿಂದಿ ಶಿಕ್ಷಕ ಮತ್ತು ಶಾಲಾ ಮುಖ್ಯೋಪಾಧ್ಯಾಯಿನಿ ಹೊಡೆದಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಡೆದಿದೆ.

ಸುಳ್ಯದ ಖಾಸಗಿ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಘಟನೆ ನಡೆದಿದ್ದು ವಿದ್ಯಾರ್ಥಿನಿಯರ ಎದುರೇ ಹಿಂದಿ ಶಿಕ್ಷಕ ಮತ್ತು ಮುಖ್ಯೋಪಾಧ್ಯಾಯಿನಿ ಹೊಡೆದಾಡಿಕೊಂಡಿದ್ದಾರೆ.

ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಹಿಂದಿ ಶಿಕ್ಷಕ ರವೀಂದ್ರ ಮುಖ್ಯೋಪಾಧ್ಯಾಯಿನಿ ಪ್ರೇಮಲತಾ ಎದುರು ತಗಾದೆ ತೆಗೆದಿದ್ದು ಮಾತಿಗೆ ಮಾತು ಬೆಳೆದಿದೆ.ಈ ಸಂಧರ್ಭದಲ್ಲಿ ಪರಿಸ್ಥಿತಿ ಕೈ ಮೀರಿ ಕೈ ಕೈ ಮೀಲಾಯಿಸಿದ್ದಾರೆ.

ವಿದ್ಯಾರ್ಥಿನಿಯರ ಎದುರೇ ಶಿಕ್ಷಕರು ಜಗಳಮಾಡಿಕೊಂಡಿದ್ದು ವಿದ್ಯಾರ್ಥಿನಿಯರನ್ನು ಬೆಚ್ಚಿ ಬೀಳಿಸಿದೆ.ಜಗಳ ತಡೆಯಲು ಬಂದ ಇತರ ಶಿಕ್ಷಕರಿಗೂ ಹಿಂದಿ ಶಿಕ್ಷಕ ರವೀಂದ್ರ ಹಲ್ಲೆ ನಡೆಸಿದ್ದು ಘಟನೆ ಶಾಲಾ ಕೊಠಡಿಯ ಸಿಸಿಟಿವಿಯಲ್ಲಿ ದಾಖಲಾಗಿದೆ.ಘಟನೆ ಸಂಬಂದ ಸುಳ್ಯ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

VIDEO

10 Shares

Facebook Comments

comments