Connect with us

LATEST NEWS

ಈ ಚಾ ಹುಡಿಗೆ ಕಿಲೋವೊಂದಕ್ಕೆ ಕೇವಲ 75000 ರೂಪಾಯಿಗಳು……..

ಗುಹವಾಟಿ, ಅಕ್ಟೋಬರ್ 31: ಟೀ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಎಲ್ಲರಿಗೂ ಬೆಳಿಗ್ಗೆ ಎದ್ದ ತಕ್ಷಣ ಒಂದು ಟೀ ಕುಡಿಯದೇ ಹೋದಲ್ಲಿ ಇಡೀ ದಿನ ಉಲ್ಲಾಸವೇ ಇಲ್ಲದಂತಾಗುವುದು ಸಾಮಾನ್ಯವೇ. ಹಾಗೆಂದ ಮಾತ್ರಕ್ಕೆ ನೀವು ಟೀ ಹುಡಿ ಕರೀದಿಸಲು ಅಬ್ಬಬ್ಬಾ ಎಂದರೆ ಕಿಲೋ ಒಂದಕ್ಕೆ ಗರಿಷ್ಟ 2 ಸಾವಿರದಿಂದ 3 ಸಾವಿರದವರೆಗಿನ ಚಾ ಹುಡಿ ಖರೀದಿಸಿರಬಹುದು.

 

ಆದರೆ ಅಸ್ಸಾಂ ನ ಗುಹವಾಟಿಯಲ್ಲಿ ತಯಾರಾಗುವ ಚಾ ಹುಡಿಗೆ ಕಿಲೋವೊಂದಕ್ಕೆ ಕೇವಲ 75,000 ರೂಪಾಯಿಗಳು ಮಾತ್ರ. ಹೌದು ವಿಶ್ವದ ಅತ್ಯಂತ ದುಬಾರಿ ಹಾಗೂ ಪ್ರಸಿದ್ಧ ಟೀ ಹುಡಿಯಾದ ಮನೋಹರೀ ಗೋಲ್ಡ್ ಈ ಬಾರಿ ಕಿಲೋವೊಂದಕ್ಕೆ 75,000 ರೂಪಾಯಿಗಳಂತೆ ಮಾರಾಟವಾಗಿದೆ.


ಗುಹವಾಟಿಯ ಮನೋಹರೀ ಟೀ ಎಸ್ಟೇಟ್ ನಲ್ಲಿ ಸುಮಾರು 2.5 ಕಿಲೋ ಮನೋಹರಿ ಟೀ ಹುಡಿ ಉತ್ಪಾದಿಸಲಾಗಿದ್ದು, ಗುಹವಾಟಿಯ ಟೀ ಹುಡಿ ಮಾರಾಟ ಕೇಂದ್ರದಲ್ಲಿ ಒಂದು ಕಿಲೋ ಟೀ ಹುಡಿ 75000 ರೂಪಾಯಿಗೆ ಮಾರಾಟವಾಗಿದ್ದು, ಈಗಾಗಲೇ ಒಟ್ಟು 1.2 ಕಿಲೋ ಚಾ ಹುಡಿ ಮಾರಾಟವಾಗಿದೆ. ಉಳಿದ ಟೀ ಹುಡಿ ಮನೋಹರೀ ಟೀ ಎಸ್ಟೇಟ್ ನಲ್ಲಿ ಮಾರಾಟಕ್ಕೆ ಸಿದ್ಧವಾಗಿದ್ದು, ಆಸಕ್ತರು ಖರೀದಿಸಬಹುದಾಗಿದೆ.

Facebook Comments

comments