FILM
ಅನಾರೋಗ್ಯದ ಬೆನ್ನಲ್ಲೇ ತುಳುನಾಡಿನ ದೈವಗಳ ಮೊರೆ ಹೋದ ತಮಿಳು ನಟ ವಿಶಾಲ್
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ಮುಲ್ಕಿ ಫೆಬ್ರವರಿ 12: ಇತ್ತೀಚೆಗೆ ತೆರೆಕಂಡ ತಮಿಳು ಚಿತ್ರ ಮದಗಜರಾಜ ಚಿತ್ರದ ಪ್ರಚಾರದ ವೇಳೆ ತಮ್ಮ ಅನಾರೋಗ್ಯದಿಂದ ಸುದ್ದಿಯಾಗಿದ್ದ ತಮಿಳಿನಿ ಖ್ಯಾತ ನಟ ವಿಶಾಲ್ ದೈವನ ನೇಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ದೈವದ ಆಶೀರ್ವಾದ ಪಡೆದರು.
ಮಂಗಳವಾರ ರಾತ್ರಿ ಪಕ್ಷಿಕೆರೆ ಸಮೀಪದ ಹರಿಪಾದೆ ಜಾರಂದಾಯ ವಾರ್ಷಿಕ ನೇಮ ನಡೆದಿದ್ದು, ದೈವಕ್ಕೆ ಮಲ್ಲಿಗೆ ಹೂವು ಅರ್ಪಿಸಿ, ಸುಮಾರು ಮೂರು ಗಂಟೆಗಳ ಕಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದರು.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಅನಾರೋಗ್ಯದಿಂದ ವಿಶಾಲ್ ಸುದ್ದಿಯಾಗಿದ್ದರು, ಮದಗಜರಾಜ ಸಿನೆಮಾ ಪ್ರಚಾರದ ವೇಳೆ ನಟನ ಸ್ಥಿತಿ ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು, ಬಳಿಕ ಆರೋಗ್ಯವಾಗಿದ್ದೇನೆ ಎಂದು ನಟ ಹೇಳಿದ್ದರು. ಇದೀಗ ತಮ್ಮ ಆರೋಗ್ಯದ ವಿಚಾರಕ್ಕೆ ತುಳುನಾಡಿನ ದೈವದ ಮೊರೆ ಹೋಗಿರುವ ನಟ ವಿಶಾಲ್ ಇದಕ್ಕಾಗಿ ದೈವಕ್ಕೆ ಪ್ರಾರ್ಥನೆ ಸಲ್ಲಿಸಿದ್ದು,
ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಅರ್ಚಕರು ಸೂಚಿಸಿದ ಹಿನ್ನೆಲೆಯಲ್ಲಿ ಅವರು ಒಪ್ಪಿಕೊಂಡರು.