Connect with us

  LATEST NEWS

  ತೈವಾನ್ ಕರಾವಳಿಯಲ್ಲಿ ಭೀಕರ ಭೂಕಂಪ – ಸುನಾಮಿ ಅಲರ್ಟ್ ಘೋಷಣೆ

  ತೈಪೆ ಎಪ್ರಿಲ್ 03:ತೈವಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. 7.2 ತೀವೃತೆಯ ಭೂಕಂಪದಿಂದಾಗಿ ನೂರಾರು ಕಟ್ಟಡಗಳು ನೆಲಸಮವಾಗಿದ್ದು ಕನಿಷ್ಠ ನಾಲ್ವರು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಜಪಾನ್ ಕರಾವಳಿ ತೀರದಲ್ಲಿ ಸುನಾಮಿ ಎಚ್ಚರಿಕೆಯನ್ನು ನೀಡಲಾಗಿದೆ


  ತೈವಾನ್‌ನಲ್ಲಿ 7.2 ತೀವ್ರತೆಯ ಭೂಕಂಪ ಸಂಭವಿಸಿದೆ,25 ವರ್ಷಗಳಲ್ಲಿ ದ್ವೀಪವನ್ನು ಅಪ್ಪಳಿಸಿದ ಪ್ರಬಲ ಭೂಕಂಪ ಇದಾಗಿದೆ. ಸದ್ಯದ ಮಾಹಿತಿ ಪ್ರಕಾರ ನಾಲ್ವರು ಸಾವನಪ್ಪಿದ್ದಾರೆ. ತೈವಾನ್‌ನ ಸರ್ಕಾರವು ಭೂಕಂಪದ ಕೇಂದ್ರಬಿಂದುವಾಗಿದ್ದ ಪರ್ವತಮಯ, ವಿರಳ ಜನಸಂಖ್ಯೆಯ ಪೂರ್ವ ಕೌಂಟಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ. ಕನಿಷ್ಠ 26 ಕಟ್ಟಡಗಳು ಕುಸಿದಿವೆ, ಹುವಾಲಿಯನ್‌ನಲ್ಲಿ ಅರ್ಧಕ್ಕಿಂತ ಹೆಚ್ಚು, ಸುಮಾರು 20 ಜನರು ಸಿಲುಕಿಕೊಂಡಿದ್ದಾರೆ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅದು ಹೇಳಿದೆ.

  ಪೂರ್ವ ತೈವಾನ್‌, ತೈಪೆ, ಓಕಿನಾವಾ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಕಟ್ಟಡಗಳು ಕುಸಿದಿವೆ, ಆದರೂ ಯಾವುದೇ ಅನಾಹುತದ ಬಗ್ಗೆ ವರದಿಗಳು ಲಭ್ಯವಾಗಿಲ್ಲ. ಕಟ್ಟಡ ಕುಸಿದಿರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
  ಭೂಮಿಯ ಮೇಲ್ಮೈಯಿಂದ ಸುಮಾರು 16 ಕಿ.ಮೀ ಆಳದಲ್ಲಿ ತೈಪೆಯ ಸಮೀಪ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ತೈವಾನ್‌ ಹವಮಾನ ಇಲಾಖೆ ವರದಿ ಮಾಡಿದೆ ಎಂದು ರಾಯಿಟರ್ಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.
  ದಕ್ಷಿಣ ಜಪಾನ್ ಮತ್ತು ಫಿಲಿಪೈನ್ಸ್ ದ್ವೀಪಗಳಿಗೆ ಸುನಾಮಿ ಎಚ್ಚರಿಕೆ ನೀಡಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply