Connect with us

    DAKSHINA KANNADA

    ‘ಕೊಡಗು ಮೈಸೂರು ಕ್ಷೇತ್ರದ ಜನ ಮೋದಿಪರ ಇಲ್ಲಿ ಸಿದ್ದರಾಮಯ್ಯ ಆಟ ನಡೆಯಲ್ಲ’ : ಸಂಸದ ಪ್ರತಾಪ್ ಸಿಂಹ

    ಪುತ್ತೂರು :  ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಬಿಜೆಪಿ ಭದ್ರಕೋಟೆಯಾಗಿದ್ದು ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಯಾವುದೇ ಆಟ ನಡೆಯುವುದಿಲ್ಲ ರಾಜ್ಯದಲ್ಲಿ ಬಿಜೆಪಿ 28 ಸ್ಥಾನಗಳನ್ನು ಗೆಲ್ಲುವುದು ಖಂಡಿತ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮೋದಿ ಅವರು ಮೊದಲ ಬಾರಿ ಪ್ರಧಾನಿಯಾಗುವಾಗ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಬಿಜೆಪಿಯ ವಶವಾಗಿತ್ತು ಇದೀಗ ಅದು ಬಿಜೆಪಿಯ ಭದ್ರಕೋಟೆ. ಈ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರ ಯಾವುದೇ ಪ್ರಭಾವ ನಡೆಯುವುದಿಲ್ಲ ಎಂದಿದ್ದಾರೆ. ಈ ಕ್ಷೇತ್ರದ ಜನ ಮೋದಿ ಪರವಾಗಿ ಇರುವವರು. ನಾನು ಮೊದಲ ಬಾರಿ ಸಂಸದನಾಗಿ ಆಯ್ಕೆಯಾದ ಸಂದರ್ಭದಲ್ಲಿ ಸಿದ್ಧರಾಮಯ್ಯನವರು ಮುಖ್ಯಮಂತ್ರಿಯಾಗಿದ್ದರು. ಎರಡನೇ ಬಾರಿ ಜೆಡಿಎಸ್ ಜೊತೆ ಸಿದ್ಧರಾಮಯ್ಯ ಮೈತ್ರಿ ಮಾಡಿ ಚುನಾವಣೆ ಎದುರಿಸಿದ್ದರು. ಇದೀಗ ಸಿದ್ಧರಾಮಯ್ಯನವರು ಮತ್ತೆ ಸಿಎಂ ಆಗಿದ್ದಾರೆ. ಆದರೆ ಕೊಡಗು-ಮೈಸೂರಿನಲ್ಲಿ ಸಿದ್ಧರಾಮಯ್ಯರ ಯಾವುದೇ ಪ್ರಭಾವ ನಡೆಯುವುದಿಲ್ಲ ಕಳೆದ ಎರಡು ಬಾರಿ ಕ್ಷೇತ್ರದ ಸಂಸದನಾಗಿ ಆಯ್ಕೆಯಾಗಿದ್ದೇನೆ ಮತ್ತು ನರೇಂದ್ರ ಮೋದಿಯವರ ಹೆಸರಿನಲ್ಲಿ ಸಂಸದನಾಗಿ ಆಯ್ಕೆಯಾಗಿದ್ದೇನೆ ಎಂದ ಅವರು ಈ ಬಾರಿ ಯದುವೀರ ಮಹಾರಾಜರ ಗೆಲುವು ನಿಶ್ಚಿತ ಎಂದ ಅವರು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ಎಸ್.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಲಿದ್ದು ಬಿಜೆಪಿ 28 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಕಾರಣ ಹಳೆ ಮೈಸೂರು ಭಾಗದಲ್ಲೂ ಪಕ್ಷಕ್ಕೆ ಲಾಭವಾಗಲಿದೆ ಎಂದುಇ ಅಭಿಪ್ರಾಯಪಟ್ಟ ಅವರು ಬಿಜೆಪಿ ಪಕ್ಷ ಆಧಾರಿತಕ್ಕಿಂತ ವ್ಯಕ್ತಿ ಆಧಾರಿತವಾಗುತ್ತಿದೆಯೇ ಎನ್ನುವ ಪ್ರಶ್ನೆ ವ್ಯಕ್ತಿಗಳಿಂದಲೇ ಪಕ್ಷ ನಿರ್ಮಾಣವಾಗಿದೆ. ಆದರೆ ಪಕ್ಷ ಕೊನೆಗೆ ವ್ಯಕ್ತಿಗಳ ಅಣತಿಯಂತೆ ನಡೆಯಬಾರದು ಎನ್ನುವುದು ಸಂಘದ ಯೋಚನೆಯಾಗಿದೆ. ಪಕ್ಷ ಇಂದು ಕೂಡಾ ರಾಷ್ಟ್ರೀಯತೆಗೆ ಚಿಂತನೆ, ರಾಷ್ಟ್ರವಾದದ ನೆಲೆಗಟ್ಟಿನಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಕೆಲವೊಮ್ಮ ನಮಗೆ ನಮ್ಮ ನಾಯಕರಾದಂತವರು ವ್ಯಕ್ತಿಗಳ ಮಾತನ್ನು ಹೆಚ್ಚಾಗಿ ಕೇಳುತ್ತಾರೆ ಎಂದು ನಮಗೆ ಅನಿಸಬಹುದು ಆದ್ರೆ ಆ ವ್ಯಕ್ತಿಗಳು ಕೂಡಾ ರಾಷ್ಟ್ರೀಯತೆಯಿಂದ ಪ್ರಭಾವಿತರಾದವರು. ಆ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ ಎಂದು ಸ್ಪಷ್ಟಪಡಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply