ಅಂದರೆ ಗಣೇಶ್ ಅಣ್ಣನ ಕಣ್ಣು ಅರಳಿದ್ದವು. ಅಗಲ ಹಣೆಯಲ್ಲಿ ಬೆವರಿನ ಸಾಲುಗಳು ಚುಕ್ಕಿ ರಂಗೋಲಿ ಬಿಡಿಸಿದ್ದವು. ಕಥೆಯ ಸರಣಿ ಆರಂಭವಾಗಿತ್ತು ಅದು ಕಟ್ಟುಕಥೆಯಲ್ಲ. ಅನುಭವಿಸಿದ ನಿಜದ ಅರಿವು ಮಾತಿನಲ್ಲಿ ಕಾಣುತ್ತಿತ್ತು. “ಆ ದಿನ ಅಕ್ಕ ಬಸ್ಸಿನಿಂದ...
ಕಳ್ಳ ಪತ್ತೆದಾರಿಕೆ ಕೆಲಸ ತುಂಬಾ ಜೋರಾಗಿ ನಡೆದಿದೆ. ಸಣ್ಣ ವಿಷಯವಾದರೆ ಮರೆತು ಬಿಡಬಹುದಿತ್ತು. ತಿಂಗಳುಗಳಿಂದಲೇ ಮತ್ತೆ ಮತ್ತೆ ಸುದ್ದಿಯಾಗುತ್ತಿರುವ ವಿಚಾರವಿದು. ಆತನ ಮುಖ ಪರಿಚಯ ಯಾರಿಗೂ ಇಲ್ಲ. ಗೊತ್ತಿರುವ ವಿಚಾರವೆಂದರೆ, ಅಂದಾಜು ಆರು ಅಡಿ ಎತ್ತರ...
ನ್ಯಾಯದ ಹೋರಾಟ ಬೆಳಗಿನ ಜಾವ ಸೂರ್ಯ ಏಳೋಕೆ ಮುಂಚೆ ಒಂದಷ್ಟು ಓಡುವ ಅಭ್ಯಾಸ ನನ್ನದು. ದಿನಕ್ಕೊಂದು ಹಾದಿ ಹಿಡಿದು ಸುಮ್ಮನೆ ಹೋಗುತ್ತೇನೆ. ದಿಕ್ಕುಗಳ ಅರಿವಿಲ್ಲ ತಿರುಗಿ ತಲುಪಬೇಕಾದದ್ದು ಮಾತ್ರ ಎಲ್ಲಿಗೆ ಅಂತ ತಿಳಿದಿದೆ .ಆ ದಿನ...
ಧೀರಜ್ ಬೆಳ್ಳಾರೆ ಅಂದು ಓಡಿದ್ದೇವೆ ಜೀವ ಉಳಿಸಿಕೊಳ್ಳಲು. ಆದರೂ ಉಳಿದದ್ದು ಕೆಲವರದ್ದು ಮಾತ್ರ. ಕೆಲವು ವರ್ಷಗಳೇ ಸಂದಿವೆ.ಊರು ನೋಡಬೇಕೆನಿಸಿತು ತಿರುಗಿ ಬಂದಿದ್ದೇನೆ .ಯಾವುದು ಮೊದಲಿನ ಹಾಗಿಲ್ಲ. ಊರು ಅನಾಥವಾಗಿದೆ. ಮುಳ್ಳು ಪೊದೆಗಳೇ ಆಶ್ರಯ ಬೇಡಿ ಪಡೆದಿದೆ...
ಅವಸರ ಅಲ್ಲಿಯ ಬಾಗಿಲು ಮುಚ್ಚಲಾಗಿದೆ .ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ ಉಸಿರ...
ಎರಡು ಘಟನೆ ಮನೆಗೆ ತೆರಳುವ ಸಮಯ ಬಸ್ಸಿಗಾಗಿ ಕಾಯುತ್ತಿದ್ದೆ. ದ್ವಿಪಥದ ರಸ್ತೆಯಾಗಿದ್ದರಿಂದ ಅತ್ತ ಕಡೆಗೂ ಒಂದು ಬಸ್ ನಿಲ್ದಾಣ .ನನ್ನ ನಿಲ್ದಾಣದಲ್ಲಿ ಬರಿಯ ಗಂಡು ದೇಹಗಳ ಇದ್ದ ಕಾರಣ ಅತ್ತ ಕಡೆಗೊಮ್ಮೆ ದೃಷ್ಟಿ ಹರಿಸಿದೆ. ಬಯಸಿದ್ದೇನೂ...
ಮೈದಾನ ನೀವು ದೊಡ್ಡೋರು ನಿಮ್ಮ ಮಾತಿಗೆ ಪೊಲೀಸ್ ಸ್ಟೇಷನ್, ಕೋರ್ಟುಗಳು ಸಹಕಾರ ನೀಡುತ್ತದೆ .ನಾನು ಯಾರ ಬಳಿ ಹೇಳಲಿ. ನನ್ನ ಆಡೋ ಮೈದಾನ ಮಾಯವಾಗಿದೆ. ಮಳೆಗಾಲವಾದರೆ ಕೆಸರಿನೊಂದಿಗೆ ,ಬಿಸಿಲಾದರೆ ಬಿಸಿಯೊಂದಿಗೆ ಆಟವಾಡುತ್ತಿದ್ದೆ ನಮ್ಮ ಖುಷಿಯ ಬಗ್ಗೆ...
ಬರಿದಾಗದ ಬದುಕು ಚೇಳ್ಯಾರಿನ ಆ ಏರು ಹತ್ತಿದರೆ ಅಲ್ಲೇ ಬಲ ಬದಿಗಿನ ಎರಡನೇ ಮನೆ ನಮ್ಮ ಗೋಪಿ ಅಜ್ಜಿದು. ಬೆನ್ನು ಬಾಗಿದರೂ ನೆರಿಗೆಗಳಿಗೆ ವಯಸ್ಸಾದರೂ ತುಟಿಯ ನಗು ಮಾಸಿಲ್ಲ. ಎಂಥವರಿಗೂ ಒಮ್ಮೆ ಮುದ್ದಿಸಬೇಕೆನ್ನುವ ಅಜ್ಜಿಯ ಪ್ರಸನ್ನತೆ....
ಅವಕಾಶ ಗೂಡು ಭದ್ರವಾಗಿದೆ ಸೋರುವ ಭಯವಿಲ್ಲ ,ಜಾರಿಹೋಗುವ ತೊಂದರೆ ಇಲ್ಲ ,ಬದುಕಿಗೆ ಆಧಾರ ಸಾಕೆನ್ನುವಷ್ಟು ಗಟ್ಟಿಯಾಗಿದೆ .ಆದರೆ ಆ ಗೂಡಿನ ಹಕ್ಕಿಗೆ ಒಂಥರಾ ಕಸಿವಿಸಿ ಗೂಡಿನೊಳಗಿನ ಬದುಕು ಬಂದನವಾಗಿದೆ. ಉಳಿದ ಹಕ್ಕಿಗಳಂತೆ ಸ್ವಚ್ಛಂದದ ಹಾರಾಟಕ್ಕೆ ಅನುಮತಿ...