ಚಂದದ ಹುಡುಗಿ ಪಾದಗಳು ಚಪ್ಪಲಿ ಧರಿಸಿ ಮಾರ್ಗ ಬದಿ ಚಲಿಸುತ್ತಿದ್ದವು. ದಾರಿಯಲ್ಲಿ ಸಾಗುತ್ತಿದ್ದ ಹಲವು ಜೋಡಿ ಚಪ್ಪಲಿಗಳೆಲ್ಲವೂ ಅವಸರವಾಗಿದ್ದವು. ಅಲ್ಲೊಂದು ಬೆಳಕು ಬೀರಲೆಂದೇ ನಿಲ್ಲಿಸಿರುವ ವಿದ್ಯುತ್ ಕಂಬದ ಕೆಳಗೆ ಅವಳು ಕುಳಿತಿದ್ದಾಳೆ .ಅದು ಬೆಳಕು ಬೀರುವ...
ಬಿರುಕು ಅಂಗಳದಿ ಬೆಳೆದ ಗಿಡ ಹೆಮ್ಮರವಾಗಿ ನೆರಳು ಕೊಡುತ್ತಿದೆ .ಆದರೆ ಅದರ ಬೇರುಗಳು ಭೂಮಿಯೊಳಗಿಂದ ಸಾಗಿ ಮನೆಯ ಜಗಲಿ ಒಳಗಿಂದ ಹಾದು ಗೋಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿ ಮನೆಯ ನೆಲದಲ್ಲಿ ಬಿರುಕನ್ನು ಮೂಡಿಸಿ ಮನೆಯನ್ನು ಉರುಳಿಸಲು ಹವಣಿಸಿದೆ....
ಅತ್ಯಾಚಾರ ಸಾರ್ ಅತ್ಯಾಚಾರವಾಗುತ್ತಿದೆ !.ಇದನ್ನು ನಿಲ್ಲಿಸಿ. ಯಾರಿಗೂ ನನ್ನ ಮಾತು ಕೇಳಿಸ್ತಾ ಇಲ್ವಾ? ಅಥವಾ ನನಗೆ ಮಾತ್ರ ಹಾಗೆ ಅನಿಸ್ತಾ ಇದೆಯಾ ?.ಎಲ್ರೂ ಆಸ್ವಾದಿಸುತಿದ್ದಾರೆ ಅಂದರೆ, ಅವರು ವಿಕೃತ ವ್ಯಕ್ತಿಗಳಾ? ಅರ್ಥವಾಗ್ತಿಲ್ಲ. ಕಿರುಚಿ ಸ್ವರ ಬತ್ತಿಹೋಗಿದೆ....
ಮುಂದೇನು? ಇದ್ದ ಡಬ್ಬದಲ್ಲಿ, ಅಂಗಿಯ ಕಿಸೆಯಲ್ಲಿ ,ನೆಲದ ಮೂಲೆಯಲ್ಲಿ, ಎಲ್ಲಾ ಕಡೆ ಚಿಲ್ಲರೆಗಳಿಗೆ ಹುಡುಕಾಟ.ಈ ದಿನ ಮನೆ ಬಿಟ್ಟು ಹೊರಡಬೇಕು. ಅಪ್ಪನನ್ನು ಪೋಲಿಸ್ ಹುಡುಕುತ್ತಿದ್ದಾರೆ. ಎರಡು ದಿನಗಳ ಹಿಂದೆ ಅಮ್ಮನಿಗೆ ಎರಡು ಹೆಂಗಸರು ಬಡಿಯುತ್ತಿದ್ದಾಗ ಅಪ್ಪ...
ಹಾದಿ ಆ ಒಂದು ಘಟನೆ ನಡೆಯದೇ ಇದ್ದಿದ್ದರೆ ಆತ ಇಂದು ಪದವಿ ಶಿಕ್ಷಣ ಮುಗಿಸಿ ರಂಗಕಲೆಯೋ ಅಥವಾ ಔದ್ಯೋಗಿಕ ಕ್ಷೇತ್ರವನ್ನು ಅರಸಿ ಸಾಧನೆಯ ಹೆಜ್ಜೆ ಇಡಬೇಕಿತ್ತು. ಹೀಗಾಗಲೇ ಬೇಕೆಂದು ಬರೆದ ಮೇಲೆ ಯಾರೇನು ಮಾಡಕ್ಕಾಗುತ್ತೆ?. ಆ...
ಮರುವಾಖ್ಯಾನ ಪುಸ್ತಕದ ಪುಟ ತಿರುವಿದಂತೆ ಕಥೆಯ ಬಲೆ ನಿಧಾನವಾಗಿ ತೆರೆದುಕೊಳ್ಳುತ್ತಾ ಹೋಯಿತು. ಓದಿನ ಜಾಡುಹಿಡಿದು ಹೊರಟವನಿಗೆ ಲೋಕದ ಅರಿವೇ ಇಲ್ಲ. ಹೊಟ್ಟೆ ಅನ್ನ ಕೇಳುತ್ತಿಲ್ಲ, ಗಂಟಲುನೀರು ಬಯಸಲಿಲ್ಲ, ಮನಸ್ಸು ಅಕ್ಷರಗಳನ್ನು ಜೋಡಿಸುತ್ತಾ ಸಾಗುತ್ತಿತ್ತು. ಪುಸ್ತಕದ ಕೊನೆಯ...
ಇದ್ಯಾಕಪ್ಪ ಹೀಗೆ ಬಾಳೆಗೊನೆ ಚೆನ್ನಾಗಿ ಬಂದಿತ್ತು. ಮಾರಾಟಕ್ಕೆ ಪೇಟೆಗೆ ಹೊರಟೆ.ಮಕ್ಕಳಿಗೆ ಬೇರೆ ಬೇರೆ ಊರಲ್ಲಿ ಕೆಲಸ .ಕೃಷಿ ನನ್ನ ಕೆಲಸ. ಬೆಲೆ ಹೇಗಿದೆಯೋ ಗೊತ್ತಿಲ್ಲ. ಚೆನ್ನಾಗಿ ಸಿಗಬಹುದೆಂಬ ನಂಬಿಕೆಯಿಂದ ತಲುಪಿದ್ದೆ. ಬೆಲೆ ಬೆಳೆಸಿದ ಖರ್ಚಿಗಿಂತ ಹೆಚ್ಚು...
ಬದಲಾಗಬೇಕಾಗಿದೆ? ಯಾರಿಗೋ ಹಿಂಸೆ ಮಾಡಿ ನಾವು ಸಂತಸ ಅನುಭವಿಸುವುದೇತಕ್ಕೆ?. ಕಾಡಲಾರಂಭಿಸಿತು. ಕ್ರೌರ್ಯ ಮನದೊಳಗೆ ಸುಳಿದಾಡಿ ಒಮ್ಮೆ ತಲ್ಲಣಿಸಿತುಜೀವ. ನಿಜ ಅಲ್ವಾ? ಪ್ರಾಣಿಗಳನ್ನು ಕೊಂದು ಹಿಂಸಿಸಿ ನಾವು ಸೇವಿಸುತ್ತಿರುವುದು ತಪ್ಪಲ್ಲವೇ ? ನಮ್ಮ ದೈನಂದಿನ ಬದುಕು ಮಾಂಸ...
ಫಲವೇನು? ಸರಕಾರದ ಹೊಸ ಕಡತಕ್ಕೆ ಕರಡುಪ್ರತಿ ತಯಾರಾಗುತ್ತಿತ್ತು. ಕೆಲವೇ ಗಂಟೆಗಳಲ್ಲಿ ಅನುಮೋದನೆಯಾಗಿ ಅಧಿಕೃತ ಮುದ್ರೆಯೂ ಬಿತ್ತು. ಕರತಾಡನಗಳ ಸುರಿಮಳೆ, ಜೊತೆಗೆ ಪತ್ರಿಕಾಪ್ರಕಟಣೆ, ಸುದ್ದಿಗೋಷ್ಠಿ, ಶಂಕುಸ್ಥಾಪನೆಯೂ ಜರುಗಿ ಬಿಟ್ಟಿತ್ತು. ಕಲ್ಯಾಣಪುರದ ಊರಿನಲ್ಲಿ ಕೆಲವು ನೂರು ಕೋಟಿಗಳನ್ನು ಖರ್ಚು...
ಪ್ರಶ್ನೆ ಕನ್ನಡ ಭಾಷೆಯ ಉಳಿವಿಗೆ ಪತ್ರದ ಅಭಿಯಾನ, ಅನ್ಯಭಾಷೆಗಳ ಹೇರಿಕೆ ಬಗ್ಗೆ ರಸ್ತೆ ಮಧ್ಯ ಪ್ರತಿಭಟನೆ ಹೀಗೆ ಹೋರಾಟಗಳನ್ನು ಆಯೋಜಿಸುತ್ತಾ ಒಂದಷ್ಟು ಸನ್ಮಾನ ಬಿರುದು ಹಾರತುರಾಯಿಗಳನ್ನ ಅರ್ಪಿಸಿಕೊಂಡವರು ದಿನೇಶರು. ಆ ದಿನ ಕೆಲಸದಲ್ಲಿ ಕನ್ನಡ ಬಳಕೆಯ...