Connect with us

LATEST NEWS

ದಿನಕ್ಕೊಂದು ಕಥೆ- ಅತ್ಯಾಚಾರ

ಅತ್ಯಾಚಾರ

ಸಾರ್ ಅತ್ಯಾಚಾರವಾಗುತ್ತಿದೆ !.ಇದನ್ನು ನಿಲ್ಲಿಸಿ. ಯಾರಿಗೂ ನನ್ನ ಮಾತು ಕೇಳಿಸ್ತಾ ಇಲ್ವಾ? ಅಥವಾ ನನಗೆ ಮಾತ್ರ ಹಾಗೆ ಅನಿಸ್ತಾ ಇದೆಯಾ ?.ಎಲ್ರೂ ಆಸ್ವಾದಿಸುತಿದ್ದಾರೆ ಅಂದರೆ, ಅವರು ವಿಕೃತ ವ್ಯಕ್ತಿಗಳಾ? ಅರ್ಥವಾಗ್ತಿಲ್ಲ. ಕಿರುಚಿ ಸ್ವರ ಬತ್ತಿಹೋಗಿದೆ. ಆದರೂ ನನ್ನ ಕಡೆಗೆ ಯಾರ ಗಮನವೂ ಇಲ್ಲ.

ಸಾರ್ ನಿಮ್ಮ ಪ್ರಕಾರ ಅತ್ಯಾಚಾರ ಅಂದರೆ ಈ ಪತ್ರಿಕೆಯಲ್ಲಿ ಬರಿತಾರಲ್ಲ, ಶೀಲಭಂಗ ಮಾಡುತ್ತಾರಲ್ಲ ಅದು ಮಾತ್ರ ಆಗಿರಬಹುದು, ಆದರೆ ನನ್ನ ಪ್ರಕಾರ ಈ ಚಲನಚಿತ್ರ ಹಾಡುಗಳಲ್ಲಿ ಅವಳ ನಡು, ಎದೆ ,ತೊಡೆಗಳನ್ನು ತೋರಿಸಿ ಹಣ ಕಮಾಯಿಸ್ತಾರಲ್ಲ ಅದೂ ಅತ್ಯಾಚಾರಾನೇ!

ಏಕೆಂದರೆ ಚಲನಚಿತ್ರ ಹಾಡುಗಳಲ್ಲಿ ಆಕೆಯ ದೇಹವನ್ನು ವರ್ಣಿಸುತ್ತಾರೆ, ದೇಹಕ್ಕೆ ಬೆಲೆ ನಿಗದಿ ಮಾಡುತ್ತಾರೆ ಹೀಗಿರುವಾಗ ಇಲ್ಲಿ ಅಭಿನಯಕ್ಕಿಂತ ಅಂಗ ಪ್ರದರ್ಶನವೇ ಮುಖ್ಯವಾಗುತ್ತದೆ.

ದೇಹ ಆತ್ಮಜ್ಞಾನದ ಪ್ರತೀಕ. ಮಾರಾಟಕ್ಕಲ್ಲ. ಇದು ನನ್ನ ಆಲೋಚನೆ ಮಾತ್ರ. ಸ್ವರ ಬಿದ್ದುಹೋಗಿದೆ ಅದಕ್ಕೆ ಮೌನವಾಗಿ ಬರವಣಿಗೆ ಇಳಿದಿದ್ದೇನೆ. ಹೇಗಾದರೂ ಸರಿ ಹೇಳಬೇಕಲ್ಲಾ! ನಿಮಗನಿಸಿದರೆ ಒಪ್ಪಿ ಇಲ್ಲವಾದರೆ ಬಿಡಿ .ನನ್ನ ಅಭಿವ್ಯಕ್ತಿಯ ಸ್ವಾತಂತ್ರ್ಯದಲ್ಲಿ ಅರಚಾಟ, ಕಿರುಚಾಟ, ಒತ್ತಾಯವಿಲ್ಲ …ಆದರೂ ಒಮ್ಮೆ ಯೋಚಿಸಿ….

ಧೀರಜ್ ಬೆಳ್ಳಾರೆ