ಹೆಸರೇನಿಡಲಿ ಹೆಸರೇನಿಡಲಿ ಗೊತ್ತಾಗುತ್ತಿಲ್ಲ. ಜಗತ್ತಿನಲ್ಲಿ ಎಲ್ಲದಕ್ಕೂ ಒಂದು ಹೆಸರಿದೆ. ನಾವಿಟ್ಟದ್ದೋ, ಇನ್ಯಾರು ಇಟ್ಟದ್ದೋ. ಒಟ್ಟಿನಲ್ಲಿ ಹೆಸರೊಂದಿದೆ.ನನಗ್ ಉಂಟಾಗುತ್ತಿರುವ ಅದೊಂದು ಭಾವಕ್ಕೆ ಏನೆಂದು ಹೆಸರಿಡಲಿ ಗೊತ್ತಾಗ್ತಾಯಿಲ್ಲ. ಅದಯ ಗೌರವ ಅಲ್ಲ, ಭಕ್ತಿಯ ಪರಾಕಾಷ್ಟೆಯಲ್ಲ, ಪ್ರೀತಿಯ ಬಾಂಧವ್ಯ ಅಲ್ಲ,...
ಕಳೆದುಕೊಂಡಿರುವುದು ಅವನು ಮನೆಯಿಂದ ಹೊರಬಿದ್ದ. ತುಂಬಾ ದಿನಗಳ ನಂತರ.ಮತ್ತದೇ ಗದ್ದಲ,ಶೇಂಗಾ ಮಾರುತ್ತಿರುವ ಅಜ್ಜಿ ,ಮೂಲೆ ಅಂಗಡಿ ರಾಜಯ್ಯ, ಜೋರಾಗಿ ಹೆಚ್ಚಿದ ಬಿಸಿಲು .ಹೊರಗೆ ಎಂದಿನಂತೆ ಇದೆ. ಅವನೊಳಗೆ ಮಾತ್ರ ಒಂದಿಷ್ಟು ಬದಲಾವಣೆಗಳಾಗಿವೆ. ಸತೀಶನನ್ನು ಕಳೆದುಕೊಂಡು ದಿನ...
ಅನಾರೋಗ್ಯಕ್ಕೆ ಮದ್ದೆಲ್ಲಿ ರಸ್ತೆ ನೇರವಾಗಿದೆ ಕೊನೆ ಕಾಣುತ್ತಿಲ್ಲ .ಆ ಕೊನೆಯನ್ನು ಬೇಗ ತಲುಪಬೇಕು ಅನ್ನುವ ಕಾರಣಕ್ಕೆ ಇಲ್ಲಿ ಗಾಡಿಯ ವೇಗ ಹೆಚ್ಚುತ್ತದೆ. ಚಕ್ರಗಳ ತಿರುಗುತ್ತಾ ನೆಲವನ್ನು ಬಿಟ್ಟು ಮೇಲೇರುತ್ತವೆ. ಕ್ಷಣದ ಆಯ ತಪ್ಪುವಿಕೆ ,ಮುಖಾಮುಖಿ ಘರ್ಷಣೆ,...
ದಾಟಿಸಬೇಕಾಗಿದೆ ಇಲ್ಲ ನನಗೊಂದು ಮಂತ್ರದ ಅವಶ್ಯಕತೆ ಇದೆ. ತುಂಬಾ ತುರ್ತಾಗಿ ಬೇಕಾಗಿದೆ. ಎಲ್ಲೂ ಸಿಕ್ತಾ ಇಲ್ಲ. ನಿಮಗೆ ಗೊತ್ತಿದ್ದರೆ ತಿಳಿಸುತ್ತೀರಾ?. ಯಾವ ಮಂತ್ರ ಅಂತನಾ… ಯಾವ ಮಂತ್ರವನ್ನು ನಾನು ಹೇಳಿ ಈ ನೋವು ದುಃಖ ಕಷ್ಟ...
ಬೇಟೆ ಅವತ್ತು ಭಾನುವಾರ ಮನೇಲಿ ಮಾಡೋಕೆ ಕೆಲಸ ಇರಲಿಲ್ಲ. ಅಪ್ಪನ ಜೊತೆ ಏಡಿ ಹಿಡಿಯೋಕೆ ನಮ್ಮೂರ ಸಣ್ಣ ಕಿಂಡಿ ಅಣೆಕಟ್ಟಿನ ಜಾಗಕ್ಕೆ ಹೋದೆ. ಅಲ್ಲಿ ಏಡಿ ಹೆಚ್ಚಾಗಿರುತ್ತದಂತೆ. ಸ್ವಲ್ಪ ಕೋಳಿ ಮಾಂಸ ಸಣ್ಣಕತ್ತಿ ಹಿಡಿದು ರಣಭೂಮಿಗೆ...
ಬುದ್ಧಿಮಾತು ಅಪ್ಪನ ಕೋಳಿ ಅಂಕದ ಕಲದಲ್ಲಿ ನಮ್ಮನೆ ಹುಂಜ ಅದ್ವಿತೀಯ ಪ್ರದರ್ಶನ ತೋರಿ ಮನೆಗೆ ಪದಾರ್ಥಕ್ಕೆ ಇನ್ನೊಂದು ಕೋಳಿಯನ್ನು ಜೊತೆಗೆ ತಂದಿತ್ತು. ಆದರೆ ತನ್ನ ಬಲ ಕಾಲಿನ ಸ್ವಾಧೀನವನ್ನು ಕಳೆದುಕೊಂಡಿತ್ತು. ಮನೆಯಲ್ಲಿ ಅದಕ್ಕೆ ಶಸ್ತ್ರಕ್ರಿಯೆ ನಡೆದು...
ಮಣ್ಣೊಳಗಿನ ಬಣ್ಣ ನಾನು ರಸಾಯನಶಾಸ್ತ್ರಜ್ಞನಲ್ಲ, ವಿಜ್ಞಾನವನ್ನು ಆಳವಾಗಿ ಅಧ್ಯಯನ ಮಾಡಿದವನೂ ಅಲ್ಲ. ಆದರೆ ಅದ್ಭುತವೊಂದನ್ನ ಕಂಡು ಹಿಡಿದಿದ್ದೇನ. ನಿಜ ಹೇಳಬೇಕೆಂದರೆ ಇದು ನಿಮಗೂ ಗೊತ್ತಿರೋದೆ. ನಾವು ನಡೆದಾಡೋ ನೆಲವಿದೆಯಲ್ಲಾ ಅದೊಂದು ಅದ್ಭುತ. ಕಣ್ಣಿಗೆ ಕಾಣೋ ಬಣ್ಣ...
ಬಡಿತ “ಅವನು ಬಂದು ಕರೆದಾಗ ಹೊರಡಲೇ ಬೇಕು.ಇಲ್ಲಪ್ಪ ಇನ್ನೊಂದೆರಡು ಸ್ವಲ್ಪ ಕೆಲಸ ಇದೆ ಆಮೇಲೆ ಬರ್ತೇನೆ ಅನ್ನೋಕೆ ಅವನು ನಮ್ಮ ಪರಿಚಿತನಲ್ಲ. ಅಪರಿಚಿತ ಆದರೂ ನಮ್ಮನ್ನು ಹುಡುಕಿಕೊಂಡು ಬಂದೇ ಬರ್ತಾನೆ ಅನ್ನೋದು ನಮಗೆ ಗೊತ್ತಿರುತ್ತೆ. ಆದರೂ...
ಪೋಸ್ಟ್ ಬಾಕ್ಸ್ ಗೇಟನ್ನು ಬಡಿದು ಬಡಿದು ಕೈ ಕೆಂಪಗಾಗಿದೆ .ಆ ಗೇಟಿನ ಬಳಿಗೆ ತಲುಪಿ ಆಗಲೇ ಗಂಟೆ 4 ದಾಟಿದೆ. ಗೇಟು ಬೀಗ ಹಾಕಿತ್ತು .ಹಾರಿ ಒಳ ಹೋಗುವುದಕ್ಕೂ ಸಾದ್ಯವಾಗದಷ್ಟು ಎತ್ತರವಾಗಿದೆ, ಸುಭದ್ರವಾಗಿದೆ .ಬಡಿತಾ ಇರೋದು...
ನೋವು ನಾನೀಗ ಬಿಡುವಾಗಿದ್ದೇನೆ . ಮೊದಲಾದರೆ ಹೊಟ್ಟೆ ತುಂಬಿ ಹೋಗುತ್ತಿತ್ತು. ಈಗ ತಿಂಗಳು ಕಾದರೂ ಒಂದೆರಡು ಅಗುಳು ಹೊಟ್ಟೆಗೆ ಇಳಿಯುತ್ತದೆ. ಮೊದಲು ಭೇಟಿಯಾಗಲು ಬರುವ ಮನಸ್ಸುಗಳು ಹಲವು ಈಗ ಜನರ ಸುಳಿವೇ ಇಲ್ಲದೆ ಜೇಡರ ಬಲೆಯನ್ನು...