Connect with us

    LATEST NEWS

    ದಿನಕ್ಕೊಂದು ಕಥೆ- ಪೋಸ್ಟ್ ಬಾಕ್ಸ್

    ಪೋಸ್ಟ್ ಬಾಕ್ಸ್

    ಗೇಟನ್ನು ಬಡಿದು ಬಡಿದು ಕೈ ಕೆಂಪಗಾಗಿದೆ .ಆ ಗೇಟಿನ ಬಳಿಗೆ ತಲುಪಿ ಆಗಲೇ ಗಂಟೆ 4 ದಾಟಿದೆ. ಗೇಟು ಬೀಗ ಹಾಕಿತ್ತು .ಹಾರಿ ಒಳ ಹೋಗುವುದಕ್ಕೂ ಸಾದ್ಯವಾಗದಷ್ಟು ಎತ್ತರವಾಗಿದೆ, ಸುಭದ್ರವಾಗಿದೆ .ಬಡಿತಾ ಇರೋದು ನನ್ನ ಮನೆಯ ಗೇಟನ್ನೇ.

    ಅದ್ಭುತವಾದ ಮನೆಯೊಳಗೆ ಯಾರೂ ಇಲ್ಲವೆಂದಲ್ಲ. ಇದ್ದಾಳೆ ನನ್ನ ಕೈ ಹಿಡಿದವಳು. ನಾನು ಊರು ಬಿಟ್ಟು ವರ್ಷಗಳಾಗಿತ್ತು. ದುಡಿಮೆಗೆ ವಿದೇಶ ಕರೆದಿತ್ತು. ತಿಂಗಳಿನ ಹಣ ಬ್ಯಾಂಕಿಗೆ ಸಂದಾಯವಾಗುತ್ತಿತ್ತು. ವಿಡಿಯೋ ಕರೆಯಲ್ಲಿ ಪ್ರೀತಿ ಉಕ್ಕಿಹರಿಯುತ್ತಿತ್ತು .ಜವಾಬ್ದಾರಿಗೆ ವಿದೇಶದಲ್ಲಿ ಬೆವರು ಹರಿಸಿದೆ. ಊರಿಗೆ ಬಂದಿಳಿದಾಗ ರೋಗವೊಂದು ಸುದ್ದಿಯಲ್ಲಿತ್ತು. ನಾನು ಆರೋಗ್ಯವಾಗಿದ್ದೇನೆ, ಪರೀಕ್ಷೆ ಕೂಡ ಮಾಡಿಕೊಂಡು ಬಂದಿದ್ದೇನೆ.

    ಮನೆಯೊಳಗಿನ ನನ್ನವಳಿಗೆ ಕೇಳಿಸ್ತಾ ಇಲ್ಲ‌. ಅವಳು ಒಪ್ಪಿಕೊಳ್ತಾನೂ ಇಲ್ಲ .ಬಾಗಿಲಿಗೆ ಬೀಗ ಹಾಕಿದ್ದಾಳೆ ಮನಸ್ಸಿಗೂ ಕೂಡ . ರೋಗವೊಂದು ಪ್ರೀತಿಯನ್ನು ದೂರ ಮಾಡುತ್ತಿದೆ. ಇಷ್ಟುದಿನ ದೂರದಲ್ಲಿದ್ದು ಆತ್ಮೀಯವಾಗಿದ್ದವಳು, ಸನಿಹದಲ್ಲಿ ದೂರವಾಗುತ್ತಿದ್ದಾಳೆ.

    ನಂಬೋದ್ಯಾರನ್ನು. ಜೀವನಪೂರ್ತಿ ಜೊತೆಯಾಗಿರುತ್ತೇನೆ ಅಂದವಳು ರೋಗಕ್ಕೆ ಹೆದರಿ ಚಿಲಕ ಹಾಕಿದ್ದಾಳೆ. ನನ್ನ ದುಡಿಮೆಯೇ ಮನೆಯೊಳಗೆ ಅವಳು, ಬೀದಿಯಲ್ಲಿ ನಾನು. ಅವಳನ್ನು ಒಪ್ಪಿಸುವುದು ಹೇಗೆ ? ಇನ್ನೂ ಬಡಿತಾನೇ ಇದ್ದೇನೆ……

    ಪಕ್ಕದ ಮನೆಯವರು ಬಂದು ನಿಂತಿದ್ದಾರೆ ನನ್ನ ಮನೆಯವರು ಬಾಗಿಲು ತೆಗೆಯುತ್ತಾನೆ ಇಲ್ಲ

    ಧೀರಜ್ ಬೆಳ್ಳಾರೆ

    Share Information
    Advertisement
    Click to comment

    You must be logged in to post a comment Login

    Leave a Reply