Connect with us

    FILM

    ತಾಯಿಯ ಆರೋಗ್ಯ ಏರುಪೇರಾದರೆ ಎಷ್ಟು ದೊಡ್ಡವನೇ ಆಗಲಿ ನಾನು ಬಿಡುವುದಿಲ್ಲ – ಅನುಶ್ರೀ ವಾರ್ನಿಂಗ್

    ಬೆಂಗಳೂರು ಸೆಪ್ಟೆಂಬರ್ 09: ಡ್ರಗ್ಸ್ ಪ್ರಕರಣದ ಬಗ್ಗೆ ಕೇಳಿ ಬಂದಿರುವ ಆರೋಪಗಳಿಗೆ ಸ್ಪಷ್ಟನೆ ನೀಡಿರುವ ಆ್ಯಂಕರ್ ಅನುಶ್ರೀ ತನ್ನ ವಿರುದ್ದ ಮಾಡುತ್ತಿರುವ ಆರೋಪ ಮಾಡುತ್ತಿರುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.


    ಸಿಂಪಲ್ ಲೈಫ್‍ನಲ್ಲಿ ನನ್ನನ್ನು ಯಾರೋ ಟಾರ್ಗೆಟ್ ಮಾಡುತ್ತಿದ್ದಾರೆ. ಯಾಕೆ, ಏನು? ಯಾವುದೂ ನನಗೆ ಗೊತ್ತಿಲ್ಲ. ಆದರೆ ನಾನು ಸತ್ಯವಾಗಿದ್ದೇನೆ, ನಾನು ಹೇಳಿದ್ದೆಲ್ಲ ಸತ್ಯ. ಇದೆಲ್ಲವನ್ನೂ ಮೀರಿ ಟಿವಿಗಳಲ್ಲಿ ಬರುತ್ತಿರುವುದನ್ನು ನಾನು ತುಂಬಾ ಸ್ಟ್ರಾಂಗ್ ಆಗಿ ಹ್ಯಾಂಡಲ್ ಮಾಡುತ್ತೇನೆ ಎಂದು ತಿಳಿಸಿದರು.

    ನನ್ನ ತಾಯಿ 60 ವರ್ಷಕ್ಕೂ ಮೇಲ್ಪಟ್ಟವರು. ಅವರ ಆರೋಗ್ಯದಲ್ಲಿ ಏನಾದರೂ ಏರುಪೇರಾದರೆ, ನನ್ನ ತಾಯಿಯ ಆರೋಗ್ಯಕ್ಕೆ ಏನಾದರೂ ತೊಂದರೆ ಆದರೆ ಅದು ಯಾವನೇ ಆಗಲಿ, ಅವನು ಎಂತಹವನೇ ಆಗಲಿ, ಎಷ್ಟು ದೊಡ್ಡವನೇ ಆಗಲಿ ನಾನು ಯಾರನ್ನೂ ಬಿಡುವುದಿಲ್ಲ ಎಂದು ವಾರ್ನ್ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply