SOMEಗೀತ ಜನ ಮಲಗಿದ್ದರೂ ಊರು ಮಲಗಿರಲಿಲ್ಲ. ಅಲ್ಲಲ್ಲಿ ಬೆಳಕಿತ್ತು, ಕೆಲವೊಂದು ಚಕ್ರಗಳು ರಸ್ತೆ ಮೇಲೆ ಚಲಿಸುತ್ತಿದ್ದವು ,ನಾಯಿಗಳ ಸವಾರಿ ಆರಂಭವಾಗಿತ್ತು. ಅದೇನು ತಿರುವಿನಿಂದ ಕೂಡಿದ ಜಾಗವಲ್ಲ !.ಹೊಂಡ ಗುಂಡಿಯಿಲ್ಲ. ಅಲ್ಲಿ ಆತ ಗಾಡಿಯಿಂದ ಕೆಳಕ್ಕೆ ಬಿದ್ದ....
ದೂರುವುದು ಯಾರನ್ನ? ರವಿಯಾಗಸದಿ ಮೂಡೋಕೆ ಇನ್ನೂ ಸಮಯವಿತ್ತು. ಆಗಲೇ ಮನೆಯಿಂದ ಹೊರಬಿದ್ದಿದ್ದ ಆತ. ಚಂದಿರನೇ ಅಸ್ಪಷ್ಟ ದಾರಿ ತೋರಿಸುತ್ತಿದ್ದ.ಗದ್ದೆಯ ಬದುವಿನಲ್ಲಿ ಸಾಗಿ ನೀರು ಬಿಟ್ಟ. ಗದ್ದೆ ಉತ್ತಾಯಿತು ,ಬಿತ್ತಾಯಿತು. ಮನೆಯ ಮಗನಂತೆ ಲಾಲಿಸಿ, ಕಲ್ಮಶಗಳನ್ನು ಕಿತ್ತು,...
ಕಳೆದುಕೊಂಡೆ ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ ಮಾಡಿದ್ದಾರೆ ,ಆಗ...
ಅವಳಿಗೆ ಅವನು ಅವಳಿಗೋ ಅವನೇ ಆಸರೆ. ಹೆಜ್ಜೆ ಇಡುವುದರಿಂದ ಹಿಡಿದು ಜಗತ್ತು ಕಾಣುವವರೆಗೆ. ದೃತರಾಷ್ಟ್ರನಿಗೆ ಸಂಜಯನಂತೆ .ಸೂರ್ಯ ಕಣ್ಣುಬಿಟ್ಟ ಗಳಿಗೆ ಜಗತ್ತೆಲ್ಲ ಬಣ್ಣಗಳ ಒಳಗೆ ಮಿಂದೆದ್ದರು ಅವಳಿಗೆ ಕಪ್ಪೊಂದೇ ಕಾಣುವ ಬೆಳಕು . ಒಂದಿನಿತೂ ಬೇಸರವಿಲ್ಲ....
ಹೀಗಾದರೆ ಸುತ್ತ ಒಂದು ಕಿಲೋಮೀಟರ್ ಯಾವುದೇ ಮನೆ ಇಲ್ಲ .ಕಾಡಿನ ನಡುವೆ ಅದೊಂದೇ ಬಂಗಲೆ. ಅರಚಿ ಕಿರುಚಿದರು ಪಕ್ಕ ಯಾರೂ ಸುಳಿಯೋದಿಲ್ಲ . ಆಗಲೇ ಮೂರು ಜನ ಮುಸುಕುಧಾರಿಗಳು ಒಬ್ಬನನ್ನು ಎಳೆದುತಂದು ಮನೆಯೊಳಕ್ಕೆ ನಡೆದರು. ಆತನ...
ಕನ್ನಡಿ ಒಡೆದ ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿದೆ .ಪ್ರತಿಯೊಂದು ತುಂಡಿನಲ್ಲೂ ಅವಳ ಕಣ್ಣೀರು ಇಳಿಯುತ್ತಿದೆ. ಗಾರೆ ಕೆಲಸದ ದುಡಿಮೆ ಅನಿವಾರ್ಯ. ಊರುಬಿಟ್ಟು ಊರಿಗೆ ಬಂದು ,ನೆಲದ ಮೇಲೆ ಬೀಳುವ ಪರಿಸ್ಥಿತಿಯಲ್ಲಿರುವ ಗೋಡೆಯ ಒಳಗೆ ಜೀವಿಸಿದ್ದಾಳೆ. ಕೆಲಸದ...
ನಾಟಕೀಯ ಬದುಕು ಅನಾಥಳೋ, ದಿಕ್ಕುತಪ್ಪಿದವಳೋ, ಎಲ್ಲಿಂದ ತಪ್ಪಿಸಿಕೊಂಡಳೋ ಗೊತ್ತಿಲ್ಲ .ಮುಖದಲ್ಲಿ ಗಾಬರಿ ,ಕಣ್ಣಲ್ಲಿ ಹಸಿವು ,ಮಣ್ಣಾದ ಬಟ್ಟೆ. ಆಗಾಗ ಹಿಂತಿರುಗಿ ನೋಡುತ್ತಾ ಏದುಸಿರು ಬಿಡುತ್ತಾ ಓಡುತ್ತಾ ನಡೆಯುತ್ತಿದ್ದಾಳೆ. ವೇಗವಾಗಿದ್ದ ಪಾದಗಳು ತಡೆದು ನಿಲ್ಲಿಸಿ ರಸ್ತೆಬದಿಯಲ್ಲಿ ಕೂರಲು...
ದುಸ್ತರ ನಾಲ್ಕು ಗೋಡೆಗಳನ್ನು ದಾಟಲೇ ಇಲ್ಲ ಸುದ್ದಿ. ಯಾಕಿರಬಹುದು? ಅದೇನು ರಸಬರಿತವಲ್ಲ! ಕಣ್ಣಗಲಿಸಿ ,ಕಿವಿಕೊಟ್ಟು ,ನಾಲಿಗೆ ಚಪ್ಪರಿಸಿ ಕೇಳುವ ಸುದ್ದಿಯಲ್ಲವಾದ ಕಾರಣ.ಬದುಕಿನ ಚಕ್ರ ಸಾಗುತ್ತಿತ್ತು ತಗ್ಗುದಿಣ್ಣೆಗಳನ್ನ, ಹೊಂಡ ಗುಂಡಿಗಳನ್ನ ನಿಭಾಯಿಸುತ್ತಾ ಸಾಗತ್ತಿದ್ದಾಗ ಕಂದಕವೊಂದು ಅಡ್ಡ ಬಂದಾಗಿತ್ತು...
ಉಳಿಸುವಿರಾ ನನಗ್ಯಾಕೋ ಕಳೆದುಹೋಗುವ ಭಯ ಆವರಿಸುತ್ತಿದೆ. ನನ್ನ ಇರುವಿಕೆಯೇ ಕಾಣದಿರುವಾಗ ಮರೆಯಾದದ್ದು ಗೊತ್ತಾಗೋದು ಹೇಗೆ ? ಅನ್ನೋದು ನಿಮ್ಮ ಪ್ರಶ್ನೆಯಲ್ಲವೆ. ನಿಮ್ಮ ಕಣ್ಣ ಮುಂದಿನ ಅಥವಾ ದೂರದ ಯಾವುದೋ ಘಟನೆ ನಿಮ್ಮ ಪ್ರತಿಕ್ರಿಯೆಗಳೇ ನನ್ನ ಸಾವು...
ಅತ್ಯಾಚಾರ ಸಾರ್ ಅತ್ಯಾಚಾರವಾಗುತ್ತಿದೆ !.ಇದನ್ನು ನಿಲ್ಲಿಸಿ. ಯಾರಿಗೂ ನನ್ನ ಮಾತು ಕೇಳಿಸ್ತಾ ಇಲ್ವಾ? ಅಥವಾ ನನಗೆ ಮಾತ್ರ ಹಾಗೆ ಅನಿಸ್ತಾ ಇದೆಯಾ ?.ಎಲ್ರೂ ಆಸ್ವಾದಿಸುತಿದ್ದಾರೆ ಅಂದರೆ, ಅವರು ವಿಕೃತ ವ್ಯಕ್ತಿಗಳಾ? ಅರ್ಥವಾಗ್ತಿಲ್ಲ. ಕಿರುಚಿ ಸ್ವರ ಬತ್ತಿಹೋಗಿದೆ....