ಬೆಂಗಳೂರು, ಸೆಪ್ಟೆಂಬರ್ 30: ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ವೇಳೆ ಡ್ರೋನ್ ಎದುರಾಗಿ ಆತಂಕ ತಂದೊಡ್ಡಿತ್ತು. ಡ್ರೋನ್ ಆಪರೇಟರ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಇಂಡಿಗೊ ಸಂಸ್ಥೆಗೆ ಸೇರಿದ ಎರಡು ವಿಮಾನಗಳು, ಮಂಗಳವಾರ...
ಉಪ್ಪಿನಂಗಡಿ, ಜನವರಿ 19: ಮಧ್ಯಾಹ್ನ ಹೊತ್ತೇ ಪ್ರತ್ಯಕ್ಷಗೊಂಡ ಚಿರತೆಯೊಂದು ಮನೆಯ ವರಾಂಡದಲ್ಲಿದ್ದ ನಾಯಿ ಮರಿಯೊಂದನ್ನು ಹೊತ್ತೊಯ್ದ ಘಟನೆ ಬುಧವಾರ ತಣ್ಣೀರುಪಂಥ ಗ್ರಾಮದ ಅಳಕ್ಕೆ ಎಂಬಲ್ಲಿ ನಡೆದಿದೆ. ತಣ್ಣೀರುಪಂಥ ಗ್ರಾಮದ ಅಳಕ್ಕೆಎಂಬಲ್ಲಿ ಗಣೇಶ್ ಎಂಬವರ ಮನೆಯ ವರಾಂಡದಲ್ಲಿ ಕಾಣಿಸಿಕೊಂಡ ಚಿರತೆ ವರಾಂಡದಲ್ಲಿ ಮಲಗಿದ್ದ 40 ದಿನ ಪ್ರಾಯದ ಪಗ್ ಜಾತಿಯ ನಾಯಿ ಮರಿಯನ್ನು ಕಚ್ಚಿಕೊಂಡು ಹೊತ್ತೊಯ್ದಿದೆ. ಗಣೇಶ್ ಇವರ ಪತ್ನಿ ಕಣಿಯೂರು ಗ್ರಾಮ ಪಂಚಾಯತ್ನಲ್ಲಿ ಪಿಡಿಒ ಆಗಿದ್ದು, ಅವರು ಕಚೇರಿಗೆ ಹೋಗಿದ್ದರು. ಕಲ್ಲೇರಿಯಲ್ಲಿ ಅಂಗಡಿ ಹೊಂದಿದ್ದ ಗಣೇಶ್ ಅವರು ಈ ಸಂದರ್ಭ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ಸಂಭವಿಸಿದೆ. ಚಿರತೆ ಬಂದು ನಾಯಿ ಮರಿಯನ್ನು ಹೊತ್ತೊಯ್ದ ಘಟನೆಯ ಬಗ್ಗೆ ಊರಿನಲ್ಲಿ ಸುದ್ದಿ ಹರಡುತ್ತಿದ್ದಂತೆ ಗ್ರಾಮದಲ್ಲಿರುವ ಚಿರತೆಯ ಬಗ್ಗೆ ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ. ಬಾರ್ಯ, ನೀಲಗಿರಿ ಪರಿಸರದಲ್ಲಿ ಸುಮಾರು 2 ತಿಂಗಳಿನಿಂದ ಚಿರತೆ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಈ ಬಗ್ಗೆ ಹಲವು ಬಾರಿ ಅರಣ್ಯ ಇಲಾಖೆ ಗಮನಕ್ಕೂ ತರಲಾಗಿದೆ.
ಸುಬ್ರಹ್ಮಣ್ಯ, ಆಗಸ್ಟ್ 15: ದಕ್ಷಿಣ ಕನ್ನಡ – ಕೊಡಗು ಜಿಲ್ಲೆಗಳ ಗಡಿಯಲ್ಲಿ ಸೋಮವಾರ ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವ ಆಗಿದೆ. ಇದರಿಂದ ಈ ಪ್ರದೇಶದ ನಿವಾಸಿಗಳು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಸುಳ್ಯ ತಾಲ್ಲೂಕಿನ ಕಲ್ಮಕಾರು ಹಾಗೂ...
ಸುಳ್ಯ, ಆಗಸ್ಟ್ 03: ಭಾರಿ ಮಳೆಯಿಂದಾಗಿ ಸುಳ್ಯ ತಾಲ್ಲೂಕಿನಲ್ಲಿ ಪಯಸ್ವಿನಿ ಉಕ್ಕಿ ಹರಿಯುತ್ತಿರುವುದರಿಂದ ಮೈಸೂರು–ಮಂಗಳೂರು ಹೆದ್ದಾರಿ ಬಂದ್ ಆಗಿದೆ. ಸುಳ್ಯ ತಾಲ್ಲೂಕಿನ ಪೇರಾಜೆ ಹಾಗೂ ಆರಂಬೂರು ಬಳಿ ಹೆದ್ದಾರಿಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ವಾಹನಗಳ...
ಹಾಸನ, ಜುಲೈ 14 : ರಾಜಧಾನಿ ಬೆಂಗಳೂರು ಹಾಗೂ ಬಂದರು ನಗರಿ ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 75 ಶಿರಾಢಿಘಾಟ್ನಲ್ಲಿ ಇಂದು ಮತ್ತೆ ಭೂಕುಸಿತ ಉಂಟಾಗಿದೆ. ಸಕಲೇಶಪುರ ತಾಲ್ಲೂಕಿನ ದೋಣಿಗಲ್ ಸಮೀಪ ವಾರದ...
ಸುಳ್ಯ, ಜೂನ್ 25: ಸುಳ್ಯ ತಾಲೂಕಿನ ಹಲವು ಪ್ರದೇಶಗಳಲ್ಲಿ ಜನರಿಗೆ ಭೂಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಮರ್ಕಂಜ, ಕೊಡಪ್ಪಾಲ, ಗೂನಡ್ಕ , ಅರಂತೋಡು ಮೊದಲಾದ ಕಡೆಗಳಲ್ಲಿ ಬೆಳಗ್ಗೆ 9.10 ರಿಂದ 9.15 ರ ಆಸುಪಾಸಿನಲ್ಲಿ...
ಸುಳ್ಯ, ಮಾರ್ಚ್ 13: ತಾಲೂಕಿನ ಕೊಲ್ಲಮೊಗ್ರ ಗ್ರಾಮದ ಇಡ್ನೂರು ಹಾಲು ಸೊಸೈಟಿಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ಒಂಟಿ ಕಾಡಾನೆಯೊಂದು ದಾಳಿ ಮಾಡಿ, ಗಂಭೀರ ಗಾಯಗೊಳಿಸಿದ ಘಟನೆ ಮಾರ್ಚ್13ರ ಮುಂಜಾನೆ ನಡೆದಿದೆ. ಕೊಲ್ಲಮೊಗ್ರ ಗ್ರಾಮದ...