ಬೋಗಿ ಪಯಣ ಸಾಗುತ್ತಿದೆ. ರೈಲಿನ ಬೋಗಿಗಳ ಕುಲುಕಾಟ ದೇಹಕ್ಕೊಂದು ಲಯವನ್ನು ನೀಡಿದೆ. ದೂರದಲ್ಲಿ ಕೇಳಿಬರುತ್ತಿರುವ ಚಾಯ್ ಚಾಯ್ ಮಧುರವಾಗಿದೆ. ಒಂದಿಷ್ಟು ಮಾತುಕತೆಗಳು ಕುತೂಹಲ ಹುಟ್ಟಿಸಿದೆ.ನಿದಾನವಾಗಿ ಕೇಳಿಸಿದ ಡೋಲಕ್ ನ ನಾದ. ಅದು ಮನ ಮುದಗೊಳಿಸುವ ನಾದವಲ್ಲ....
ಚಲನೆ “ಚಲನೆ ಇದ್ದರೆ ಮಾತ್ರ ಅಲ್ಲವೇ ಬದುಕು ಮತ್ತು ಅಭಿವೃದ್ಧಿ ಸಾಧ್ಯ. ಯಾವುದಾದರೂ ಆಗಬಹುದು ಸ್ಥಿರವಾಗಿದ್ದರೆ ಗತಿಸುತ್ತದೆ”. “ಇಲ್ಲ ನಾನಿದನ್ನು ಒಪ್ಪುವುದಿಲ್ಲ, ಮರ ನಿಂತಿರುವುದಿಲ್ಲವಾ? ಮನೆ ,ದೊಡ್ಡ ಕಂಬ, ದೇವಸ್ಥಾನ ,ಶಿಲಾಶಾಸನ ,ಅಣೆಕಟ್ಟು,ಇವೆಲ್ಲವೂ ನಿಂತಿರುವುದಲ್ಲವಾ?”. ”...
ಭಾವನೆ “ಮಾತು ಎಲ್ಲಿಂದ ಬಂದರು ಒಪ್ಪುವುದಾದರೆ ಪಡೆದುಕೋ” ಅಂತ ಸದಾಶಿವ ಸರ್ ಆಗಾಗ ಹೇಳ್ತಾಯಿದ್ರು ಹಾಗಾಗಿಯೇ ನಾನು ಅವನ ಮಾತನ್ನ ಕೇಳಿದ್ದು. ನನಗಿಂತ ಸಣ್ಣವ, ಹಾಗಂತ ನಾನೇನು ಎರಡು ಮಕ್ಕಳ ತಂದೆಯಲ್ಲ .ಅವನು ನನ್ನ ವಯಸ್ಸಿಗಿಂತ...
ಅಜ್ಜಿ ಬಿಸಿಲಿನ ಝಳವನ್ನು ತಡಿಯೋಕ್ಕಾಗದೆ ಸೂರ್ಯ ಮೋಡವನ್ನು ಕರೆದು ಮರೆಮಾಡಿ ನೆರಳಿಗೆ ಬಂದು ನಿಂತ. ಅದಕ್ಕೆ ಕಾಯುತ್ತಿದ್ದರೋ ಅಥವಾ ಸಮಯವಾಯಿತೋ ಗೊತ್ತಿಲ್ಲ ಕತ್ತಿಹಿಡಿದು ಹುಲ್ಲು ತರೋಕೆ ತೋಟದ ಕಡೆಗೆ ನಡೆದರು ನನ್ನ ಲಕ್ಷ್ಮಿ ಅಜ್ಜಿ. ಅವರ...
ಪೊಟೋಗ್ರಾಪರ್ ಅಕ್ಷತೆಗಳು ನೆಲದ ಮೇಲೆ ಬಿದ್ದಿವೆ. ಸಂಭ್ರಮದ ಮಾತುಗಳು ಸುತ್ತಲೆಲ್ಲ ತುಂಬಿದೆ. ಶುಭಾಶಯಗಳ ವಿನಿಮಯ ,ಗಟ್ಟಿಮೇಳದ ನಾದನ, ಜೀವನದ ಅದ್ಭುತ ಕ್ಷಣವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ ಎಲ್ಲಾ.ಹಲವು ವರ್ಷವಾದ ಮೇಲೆ ಮತ್ತೊಮ್ಮೆ ಈ ಸಂಭ್ರಮವನ್ನು ನೆನಪಿಸಿಕೊಳ್ಳಬೇಕೆಂಬ ಕಾರಣಕ್ಕೆ ಅವನನ್ನು...
“ಮಾನವ?” ನಮ್ಮೂರಿನ ಗುಡ್ಡದಿಂದ ಇಳಿದು ಬರುವ ಸಣ್ಣ ತೊರೆಯು ಗದ್ದೆ ತೋಟಗಳನ್ನು ಹಾದು, ರೋಡು ಬೆಟ್ಟವನ್ನು ಹತ್ತಿ ಇಳಿದು, ಧುಮುಕಿ, ನದಿಯಾಗಿ ಸಾಗರವನ್ನು ಸೇರುತ್ತದೆ. ನಮ್ಮೂರಿನ ಗುಡ್ಡದಲ್ಲಿ ಹುಟ್ಟುವ ನೀರನ್ನ ಮಾತನಾಡಿಸುವ ಆಸೆಯಿಂದ ಸಮುದ್ರದ ಬಳಿ...
ದಡ ಚಕ್ರಗಳ ವೇಗದ ತಿರುವಿಕೆ ಗೆ ಧೂಳಿನ ಕಣಗಳು ಮೇಲೆದ್ದು ನಿಂತು ಕೂರಲು ಜಾಗವನ್ನು ಹುಡುಕುವಾಗಲೇ ಕಂಡದ್ದು ಅಜ್ಜನ ಚಹಾ ಅಂಗಡಿ. ಅದೇನು ಭದ್ರವಾಗಿ ನಿಲ್ಲುವ ಗೋಡೆಯನ್ನು ಹೊಂದಿಲ್ಲ ಆದರೆ ಬಾಂಧವ್ಯವಿದೆ ಬಿಗಿಯಾಗಿ.ಹಾಗಾಗಿ ಜನ ಬರುತ್ತಾರೆ....
ಮ(ಗು)ಣ್ಣು ಮಣ್ಣು ಅಳುತ್ತಿದೆ .ನಮ್ಮ ಕಿವಿಗಳಿಗೆ ಕೇಳುತ್ತಿಲ್ಲ. ಟಿವಿಗಳ ಬೊಬ್ಬೆ, ಹೋರಾಟದ ಕಿಚ್ಚು, ಸುದ್ದಿಗಳ ತಲ್ಲಣವೇ ತುಂಬಿರುವಾಗ ಅಳುವಿನ ಕೂಗು ಕೇಳೋದು ಹೇಗೆ ಅಲ್ವಾ?. ನೀಲಾಕಾಶದ ಕೆಳಗೆ ಜೀವಂತವಾಗಿ ಪಡಿಸಿರುವ ನೆಲ ಕಾಯುತ್ತಿದೆ ಮುಕ್ತಿ ನೀಡಲು....
ಅವರು ಕತ್ತಲೆ ಮಲಗಿತ್ತು. ಗಾಢನಿದ್ರೆಯ ಪರದೆಗಳು ಒಂದೊಂದಾಗಿ ಮುಚ್ಚುತ್ತಿದ್ದವು. ಡಬ್ ಡಬ್ ಶಬ್ದ ,ಎದೆಬಡಿತವೇ ಎಂದುಕೊಂಡರೆ ಅಲ್ಲ ಬಾಗಿಲ ಬಡಿತ. ಜನರಿಲ್ಲದ ಊರಿನಲ್ಲಿ ಯಾರದು ?. ಏಳುವ ಮನಸ್ಸು ಇಲ್ಲದಿದ್ದರೂ ಆ ಬಡಿತದಲ್ಲೊಂದು ಕಾತುರತೆಯ ಯಾತನೆ...
ಯಂತ್ರ ನಿಮಗೇನಾದರೂ ಗೊತ್ತಿದೆಯಾ? ಎಲ್ಲಿ ಸಿಗುತ್ತೆ ಅಂತ .ದಯವಿಟ್ಟು ಹುಡುಕಿಕೊಡಿ. ಪುಣ್ಯ ಕಟ್ಟಿಕೊಳ್ಳಿ .ನನಗಾಗುತ್ತಿಲ್ಲ .ಈ ಸಮಸ್ಯೆ ಪರಿಹಾರ ಆಗೋಕೆ ಅದು ಬೇಕೇ ಬೇಕು .ಇನ್ನೂ ಗೊತ್ತಾಗ್ಲಿಲ್ವಾ ? ಹೋ !ನಾನು ಹೇಳಿದ್ರೆ ತಾನೇ ಗೊತ್ತಾಗೋದು....