LATEST NEWS
ರಾಜ್ಯಮಟ್ಟದ ಸಬ್ ಜೂನಿಯರ್ ಈಜು ಸ್ಪರ್ಧೆ: ಮಂಗಳೂರಿನ ಶೃತಿ ದಿವಾಕರ್ ಸುವರ್ಣ ವೈಯಕ್ತಿಕ ಚಾಂಪಿಯನ್
ಮಂಗಳೂರು ಜುಲೈ 08 : ಕರ್ನಾಟಕ ಈಜು ಸಂಸ್ಥೆಯ ಆಶ್ರಯದಲ್ಲಿ ಜುಲೈ 5 ರಿಂದ 7ರ ವರೆಗೆ ಜರುಗಿದ ಎನ್ ಆರ್ ಜೆ ರಾಜ್ಯಮಟ್ಟದ ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ಮಂಗಳೂರಿನ ಮಂಗಳೂರಿನ ಶೃತಿ ದಿವಾಕರ್ ಸುವರ್ಣ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದಿದ್ದಾರೆ.
ಇವರು ವಿ ಒನ್ ಎಕ್ವ ಸೆಂಟರ್ ನಲ್ಲಿ ಈಜು ತರಬೇತಿ ಪಡೆಯುತ್ತಿದ್ದು, ಸಬ್ ಜೂನಿಯರ್ ವಿಭಾಗದಲ್ಲಿ 5 ಚಿನ್ನ ಹಾಗೂ 2 ಬೆಳ್ಳಿಗಳೊಂದಿಗೆ ವೈಯಕ್ತಿಕ ಚಾಂಪಿಯನ್ನಾಗಿ ಮೂಡಿ ಬಂದಿದ್ದಾರೆ. ಇದರೊಂದಿಗೆ ಒರಿಸ್ಸಾದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
You must be logged in to post a comment Login