Connect with us

  LATEST NEWS

  ಹಿಂದೂಗಳನ್ನು ಹಿಂಸಾಚಾರಿಗಳು ಎಂದು ರಾಹುಲ್ ಗಾಂಧಿ ಎಲ್ಲಿಯೂ ಕರೆದಿಲ್ಲ – ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

  ನವ ದೆಹಲಿ ಜುಲೈ 08 :ಲೋಕಸಭೆಯಲ್ಲಿ ರಾಹುಲ್ ಗಾಂಧಿ ಹಿಂದೂಗಳ ವಿರುದ್ದ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದರೆ. ಇದೀಗ ಉತ್ತರಾಖಂಡ ಜ್ಯೋತಿರ್ ಮಠದ 46 ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ರಾಹುಲ್ ಗಾಂಧಿ ಬೆಂಬಲಕ್ಕೆ ಬಂದಿದ್ದು, ಹಿಂದೂಗಳನ್ನು ಹಿಂಸಾಚಾರಿಗಳು ಎಂದು ರಾಹುಲ್ ಗಾಂಧಿ ಎಲ್ಲಿಯೂ ಕರೆದಿಲ್ಲ ಎಂದು ಹೇಳಿದ್ದಾರೆ.


  ಈ ಬಗ್ಗೆ ಮಾತನಾಡಿದ ಅವರು ನಾನು ರಾಹುಲ್ ಗಾಂಧಿ ಅವರ ಸಂಪೂರ್ಣ ಬಾಷಣವನ್ನು ಆಲಿಸಿದ್ದೇನೆ ಅದರಲ್ಲಿ ಅವರು ಎಲ್ಲಿಯೂ ಅವರು ಯಾವುದೇ ತಪ್ಪು ಹೇಳಿಲ್ಲ ಎನ್ನುವುದು ಕಂಡುಬಂದಿದೆ. ಹಿಂದುತ್ವವು ಹಿಂಸೆಯನ್ನು ತಿರಸ್ಕರಿಸುತ್ತದೆ ಎಂದು ರಾಹುಲ್ ಗಾಂಧಿ ಅವರು ಬಹಳ ಸ್ಪಷ್ಟವಾಗಿ ಒತ್ತಿ ಹೇಳಿರುವುದು ತುಂಬಾ ಸರಿಯಾಗಿದೆ ಎಂದು ಜ್ಯೋತಿರ್‌ ಮಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಭಾನುವಾರ ಹೇಳಿದ್ದಾರೆ.

  ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಕುರಿತಾದ ಚರ್ಚೆ ವೇಳೆ, ಕೋಮು ಆಧಾರದಲ್ಲಿ ಬಿಜೆಪಿ ನಾಯಕರು ಜನರನ್ನು ವಿಭಜಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು. ಆಗ ಅವರು ‘ಹಿಂಸಾತ್ಮಕ ಹಿಂದೂಗಳು’ ಎಂಬ ಪದ ಬಳಸಿದ್ದು ವಿವಾದಕ್ಕೆ ಕಾರಣವಾಗಿತ್ತು.

  ಈ ಹೇಳಿಕೆಯನ್ನು ಖಂಡಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಅವರು ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು. ಇದು ಸಂಸತ್‌ನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಕಾಂಗ್ರೆಸ್ ನೇತೃತ್ವ ಐಎನ್‌ಡಿಐಎ ಬಣಗಳ ಸಂಸದರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಗಿತ್ತು. ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಸ್ಪೀಕರ್ ಓಂ ಬಿರ್ಲಾ ಅವರು ಕಡತದಿಂದ ತೆಗೆಸಿದ್ದರು.

  Share Information
  Advertisement
  Click to comment

  You must be logged in to post a comment Login

  Leave a Reply